ಮಾ. 12-15 ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ಶಾಂತಿನಗರ ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಳದಲ್ಲಿ ಮಾ. 12 ರಿಂದ 15 ತನಕ 37 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ಮಾ. 11 ರಂದು ಸಂಜೆ ಕಿನ್ನಿಗೋಳಿಯಿಂದ ವೀರಭದ್ರ ಸ್ವಾಮಿ ಮತ್ತು ನವಗ್ರಹ ದೇವರ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಳಕ್ಕೆ ತರಲಾಗುವುದು. ಮಾ. 12 ರಂದು ನವಗ್ರಹ ಬಿಂಬ ಹಾಗೂ ಶ್ರೀ ವೀರಭದ್ರ ಸ್ವಾಮಿ ಬಿಂಬ ಶ್ರೀ ವೀರಭದ್ರ ಸ್ವಾಮಿ ಮತ್ತು ನವಗ್ರಹ ದೇವರ ಬಿಂಬ ಪ್ರತಿಷ್ಠೆ ನಡೆಯಲಿದೆ. ಮಾ. 14 ರಂದು ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ, ಸಂಜೆ ಸಾಮೂಹಿಕ ಸತ್ಯನಾರಯಣ ಪೂಜೆ, ಮಾ. 15 ರಂದು ಬೆಳಿಗ್ಗೆ ಚಂಡಿಕಾ ಹವನ ಭಜನಾ ಕಾರ್ಯಕ್ರಮ, ರಾತ್ರಿ ಯಕ್ಷಗಾನ ಬಯಲಾಟ ನಡೆಯಲಿದೆ ಎಮದು ದೇವಳದ ಧರ್ಮದರ್ಶಿ ವಿವೇಕಾನಂದ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-10031802
ಕೊಡೆತ್ತೂರು ನೇಮ, ಧಾರ್ಮಿಕ ಸಭೆ

ಕಿನ್ನಿಗೋಳಿ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದು ಸಮಾಜದ ಮೇಲೆ ನಿರಂತರವಾಗಿ ದಾಳಿ ನಡೆದರೂ ಮತ್ತೆ ಎದ್ದು ನಿಲ್ಲುವ ಶಕ್ತಿ ಇದೆ. ಹಿಂದು ಸಮಾಜವನ್ನು ಉಳಿಸಿ ಬೆಳೆಸುವ ಕೆಲಸ...

Close