ಅತ್ತೂರು ಪುನಃ ಪ್ರತಿಷ್ಟೆ ಹಾಗೂ ಕಲಶಾಭಿಷೇಕ

ಕಿನ್ನಿಗೋಳಿ: ಸನಾತನ ಸಂಸ್ಕತಿಯ ಪ್ರತೀಕವಾದ ದೈವ ದೇವಳ ಹಾಗೂ ಧಾರ್ಮಿಕ ಕೇಂದ್ರಗಳು ಭಕ್ತರ ಸಹಕಾರದಿಂದ ಬೆಳೆದು ನಿಂತಿವೆ ಎಂದು ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಇದರ ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಹೇಳಿದರು.
ಭಾನುವಾರ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಇಲ್ಲಿನ ಪುನರ್ ನಿರ್ಮಾಣಗೊಂಡ ಅತ್ತೂರು ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರ ಪುನಃ ಪ್ರತಿಷ್ಟೆ ಹಾಗೂ ಕಲಶಾಭಿಷೇಕ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಅರ್ಚಕ ಅತ್ತೂರು ಬಲು ವೆಂಕಟರಾಜ ಉಡುಪ, ಆದಿತ್ಯ ಮುಕ್ಕಾಲ್ದಿ ಖಂಡಿಗೆ ಬೀಡು, ಮುಂಜುಕಾವ ಪಣಂಬೂರು ಕಾವರ ಮನೆ, ಶಂಕರ ಶೆಟ್ಟಿ ಗುತ್ತಿನಾರ್ ಕುಳಾಯಿಗುತ್ತು, ನಲ್ಯ ಗುತ್ತು ಗುತ್ತಿನಾರ್ ಭೋಜ ಶೆಟ್ಟಿ , ಜಯ ಶೆಟ್ಟಿಯಾಳ್, ಗುತ್ತಿನಾರ್ ಎತಮಾರುಗುತ್ತು, ಉಮೇಶ್ ಶೆಟ್ಟಿ ಗುತ್ತಿನಾರ್ ಶಿಬರೂರು ಗುತ್ತು, ಶಿಬರೂರು ದೆಂದೋಟ್ಟು ಗುತ್ತಿನಾರ್ ಸುಧಾಕರ, ಏಳಿಂಜೆ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಭೋಜ ಶೆಟ್ಟಿ ಮಾನಂಪಾಡಿ ಗುತ್ತು ಗುತ್ತಿನಾರ್ ಅವರನ್ನು ಗೌರವಿಸಲಾಯಿತು.
ಪ್ರಸನ್ನ ಎಲ್. ಶೆಟ್ಟಿ ಅತ್ತೂರಗುತ್ತು, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ರಾಜೇಶ್ ಶೆಟ್ಟಿ ಭಂಡಾರ ಮನೆ, ಪೂವಪ್ಪ ಶೆಟ್ಟಿ ಭಂಡಾರ ಮನೆ, ಪ್ರವೀಣ್ ಮಾಡ ಮಾಡರ ಮನೆ, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶಂಕರ ಶೆಟ್ಟಿ ಮೂಡ್ರಗುತ್ತು, ಮಹಾಬಲ ಶೆಟ್ಟಿ ಪಡುಮನೆ, ಶೇಖರ ಶೆಟ್ಟಿ ಮೇಗಿನ ಮನೆ, ಶ್ರೀಧರ ಶೆಟ್ಟಿ ಬಾಂಜಾಲಗುತ್ತು, ರಾಘು ಶೆಟ್ಟಿ ಭಂಡಾರ ಮನೆ, ಶಂಕರ ಶೆಟ್ಟಿ ಭಂಡಾರ ಮನೆ, ದಯಾನಂದ ಶೆಟ್ಟಿ ಖಂಡಿಗೆಬೀಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-12031809

Comments

comments

Comments are closed.

Read previous post:
Kinnigoli-12031808
ಪುನರೂರು : ಮರ ಬಿದ್ದು ಹೆದ್ದಾರಿ ಬಂದ್

ಕಿನ್ನಿಗೋಳಿ: ಮೂಲ್ಕಿ - ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಪುನರೂರು ಭಾರತಮಾತ ಶಾಲೆಯ ಬಳಿಯ ಮರಕ್ಕೆ ಭಾನುವಾರ ಬೆಂಕಿ ಹತ್ತಿ ರಸ್ತೆಗೆ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ ವಾಗಿದೆ. ಕಳೆದ...

Close