ಬಳ್ಕುಂಜೆ ಹಕ್ಕುಪತ್ರ ವಿತರಣೆ

ಕಿನ್ನಿಗೋಳಿ : ಗ್ರಾಮ ಪಂಚಾಯಿತಿ ಸದಸ್ಯರು ಜನಪ್ರತಿನಿಧಿಗಳು ವಾರ್ಡ್‌ನ ಪ್ರತಿ ಮನೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಹಾಗಾದಾಗ ಮಾತ್ರ ಗ್ರಾಮದ ಪೂರ್ಣ ಅಭಿವೃದ್ಧಿ ಸಾಧ್ಯ ಇದು ಸಿದ್ದರಾಮಯ್ಯ ಸರಕಾರದ ಆಶಯ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 94 ಸಿ. ಸಿ ಅನ್ವಯ 40 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ ಕೋಟ್ಯಾನ್, ಮಮತಾ ಪೂಂಜಾ, ಗೀತಾ ನಾಯ್ಕ್, ಪ್ರಭಾಕರ ಶೆಟ್ಟಿ, ಶಶಿಕಲಾ, ಪ್ರಸಾದ್ ಶೆಟ್ಟಿ, ಪಿಡಿಒ ಜಲಜ ಟಿ. ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಎಲ್. ಮಾಣಿಕ್ಯ ಪ್ರಸ್ತಾವನೆಗೈದರು. ಕಂದಾಯ ನಿರೀಕ್ಷಕ ದಿಲೀಪ್ ಸ್ವಾಗತಿಸಿದರು. ಗ್ರಾಮ ಕರಣಿಕ ಕಿರಣ್ ಹಾಗೂ ಸಂತೋಷ್ ಹಕ್ಕುಪತ್ರ ವಿವರ ನೀಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-120318011

Comments

comments

Comments are closed.

Read previous post:
Kinnigoli-120318010
ಅತ್ತೂರು ಪುನಃ ಪ್ರತಿಷ್ಟೆ ಹಾಗೂ ಕಲಶಾಭಿಷೇಕ

ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಇಲ್ಲಿನ ಪುನರ್ ನಿರ್ಮಾಣಗೊಂಡ ಅತ್ತೂರು ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದಲ್ಲಿ ಶ್ರೀ ಅರಸು...

Close