ಸ್ವಾಭಿಮಾನದ ಬದುಕು ರಿಕ್ಷಾ ಚಾಲಕರು ಬೆಳೆಸಬೇಕು

ಕಿನ್ನಿಗೋಳಿ: ಸ್ವಯಂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ರಿಕ್ಷಾ ಚಾಲಕರು ಬೆಳೆಸಬೇಕು ರಿಕ್ಷಾ ಚಾಲಕರ ಸಂಘಟನಾ ಶಕ್ತಿಗೆ ಸಮಾಜ ಬೆಂಬಲಿಸಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿ ಮಾತನಾಡಿ ರಿಕ್ಷಾ ಚಾಲಕರಲ್ಲಿ ಸೇವಾ ಮನೋಭಾವನೆ ಇರುವುದರಿಂದ ಸಮಾಜದಲ್ಲಿ ಅವರಿಗೆ ಗೌರವ ಸ್ಥಾನ ಮಾನ ಸಿಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಅರ್ಹ ೫೨ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿಯನ್ನು ನೀಡಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಂಗಳೂರು ಮೂಡಾ ಸದಸ್ಯ ಎಚ್. ವಸಂತ ಬೆರ್ನಾಡ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಬೆಳ್ಳಾಯರು, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಉದ್ಯಮಿ ಶಶೀಂದ್ರ ಎಂ. ಅಮೀನ್, ಕರ್ನಿರೆ ಪಟ್ರೆಗುತ್ತು ಜಯದೀಪ್ ಆರ್. ಅಮೀನ್, ಮೂಲ್ಕಿ ಹೋಬಳಿ ರಿಕ್ಷಾ ಯೂನಿಯನ್ ಅಧ್ಯಕ್ಷ ಬಳ್ಕುಂಜೆ ದಿನಕರ ಶೆಟ್ಟಿ, ಕಾರ್ನಾಡು ರಿಕ್ಷಾ ಯೂನಿಯನ್ ಎಂ.ಶರೀಫ್ ಕಿಲ್ಪಾಡಿ, ಮೂಲ್ಕಿ ಮೋಹನ್ ಕುಬೆವೂರು, ಕೊಲ್ನಾಡ್ ಸುನಿಲ್ ಸಾಲ್ಯಾನ್, ಕಿನ್ನಿಗೋಳಿ ರಿಕ್ಷಾ ಯೂನಿಯನ್ ಅಧ್ಯಕ್ಷ ಜೇಮ್ಸ್ ಮಾರ್ಟಿಸ್, ಪಕ್ಷಿಕೆರೆ ರಿಕ್ಷಾ ಯೂನಿಯನ್ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್, ಬಜಪೆ ರಿಕ್ಷಾ ಯೂನಿಯನ್ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಹಳೆಯಂಗಡಿ ರಿಕ್ಷಾ ಯೂನಿಯನ್ ಅಧ್ಯಕ್ಷ ಚಂದ್ರಶೇಖರ ಕದಿಕೆ ಸ್ವಾಗತಿಸಿದರು, ಶೈಲಜಾ ಅಮೀನ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-120318012

Comments

comments

Comments are closed.

Read previous post:
Kinnigoli-120318011
ಬಳ್ಕುಂಜೆ ಹಕ್ಕುಪತ್ರ ವಿತರಣೆ

ಕಿನ್ನಿಗೋಳಿ : ಗ್ರಾಮ ಪಂಚಾಯಿತಿ ಸದಸ್ಯರು ಜನಪ್ರತಿನಿಧಿಗಳು ವಾರ್ಡ್‌ನ ಪ್ರತಿ ಮನೆಗೆ ಭೇಟಿ ನೀಡಿ ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಹಾಗಾದಾಗ ಮಾತ್ರ ಗ್ರಾಮದ ಪೂರ್ಣ ಅಭಿವೃದ್ಧಿ ಸಾಧ್ಯ ಇದು ಸಿದ್ದರಾಮಯ್ಯ...

Close