ನಾಟಿ ವೈದ್ಯೆ ಸುಮತಿ ಭುಜಂಗ ಆಚಾರ್ಯ ಸನ್ಮಾನ

ಕಿನ್ನಿಗೋಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಸಬಲೆಯಾಗಿ ಉತ್ತಮ ಸಂಘಟನಾ ಶಕ್ತಿಯನ್ನು ಮೈಗೂಡಿಸಿಕೊಂಡು ಸಮಾಜ ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಕಟೀಲು ಕಾಲೇಜು ಉಪನ್ಯಾಸಕಿ ಡಾ. ಸುನೀತಾ ಎಚ್. ಎಮ್ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ ಸಭಾಭವನದಲ್ಲಿ ಶ್ರೀ ಕಾಳಿಕಾಂಬ ಮಹಿಳಾ ವೃಂದ ಶನಿವಾರ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಮಾತನಾಡಿದರು.
ನಾಟಿ ವೈದ್ಯೆ ಸುಮತಿ ಭುಜಂಗ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಶ್ರೀ ಕಾಳಿಕಾಂಬ ಮಹಿಳಾ ವೃಂದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಅನಿತಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-12031807

Comments

comments

Comments are closed.

Read previous post:
Kinnigoli-12031806
ರೊಟರ‍್ಯಾಕ್ಟ್ ಜಿಲ್ಲಾ ಸಮ್ಮೇಳನ

ಕಿನ್ನಿಗೋಳಿ: ಯುವ ಜನತೆ ಸಾಧನೆ ಮಾಡಿ ಯಶಸ್ವಿ ಜೀವನವನ್ನು ಕಂಡುಕೊಳ್ಳಬೇಕು. ಏನಾದರೂ ಸಾಧಿಸಬೇಕಾದರೆ ಹಿರಿಯರ ಮಾರ್ಗದರ್ಶನ, ಆಸಕ್ತಿ, ಏಕಾಗ್ರತೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರ‍್ಯಾಕ್ಟ್ ಜಿಲ್ಲಾ ಸಭಾಪತಿ...

Close