ಪುನರೂರು : ಮರ ಬಿದ್ದು ಹೆದ್ದಾರಿ ಬಂದ್

ಕಿನ್ನಿಗೋಳಿ: ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಪುನರೂರು ಭಾರತಮಾತ ಶಾಲೆಯ ಬಳಿಯ ಮರಕ್ಕೆ ಭಾನುವಾರ ಬೆಂಕಿ ಹತ್ತಿ ರಸ್ತೆಗೆ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ ವಾಗಿದೆ. ಕಳೆದ ವರ್ಷ ರಸ್ತೆಯ ಹತ್ತಿರವಿದ್ದ ಈ ಮರಕ್ಕೆ ಬೆಂಕಿ ಹತ್ತಿ ಸುಮಾರು ಅರ್ಧದಷ್ಟು ಮರ ಸುಟ್ಟು ಹೋಗಿತ್ತು ಆದರೇ ಈಗ ಅದೇ ಮರದ ಉಳಿದ ಭಾಗಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ್ದು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಮರದ ಹತ್ತಿರವಿದ್ದ ವಿದ್ಯುತ್ ಕಂಬದ ಮೇಲೆ ಮರ ಬಿದ್ದುದರಿಂದ ಕಿನ್ನಿಗೋಳಿ ಹಾಗು ಕಟೀಲು ವಿದ್ಯುತ್ ಲೈನ್ ಸಂಪರ್ಕ ಕಡಿತಗೊಂಡಿದೆ. ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯಿತು. ಹಾಗೂ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಜೋಡನೆಯ ಕೆಲಸವು ನಡೆಯಿತು.

Kinnigoli-12031808

Comments

comments

Comments are closed.

Read previous post:
Kinnigoli-12031807
ನಾಟಿ ವೈದ್ಯೆ ಸುಮತಿ ಭುಜಂಗ ಆಚಾರ್ಯ ಸನ್ಮಾನ

ಕಿನ್ನಿಗೋಳಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ ಸಬಲೆಯಾಗಿ ಉತ್ತಮ ಸಂಘಟನಾ ಶಕ್ತಿಯನ್ನು ಮೈಗೂಡಿಸಿಕೊಂಡು ಸಮಾಜ ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಕಟೀಲು ಕಾಲೇಜು ಉಪನ್ಯಾಸಕಿ ಡಾ....

Close