ರೊಟರ‍್ಯಾಕ್ಟ್ ಜಿಲ್ಲಾ ಸಮ್ಮೇಳನ

ಕಿನ್ನಿಗೋಳಿ: ಯುವ ಜನತೆ ಸಾಧನೆ ಮಾಡಿ ಯಶಸ್ವಿ ಜೀವನವನ್ನು ಕಂಡುಕೊಳ್ಳಬೇಕು. ಏನಾದರೂ ಸಾಧಿಸಬೇಕಾದರೆ ಹಿರಿಯರ ಮಾರ್ಗದರ್ಶನ, ಆಸಕ್ತಿ, ಏಕಾಗ್ರತೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ರೋಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಯತೀಶ್ ಬೈಕಂಪಾಡಿ ಹೇಳಿದರು.
ಕಿನ್ನಿಗೋಳಿ ರೊಟರ‍್ಯಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಪಕ್ಷಿಕೆರೆ ಸಂತ ಜೂದರ ಗೊಲ್ಡನ್ ಮೆಮೊರಿಯಲ್ ಅಡಿಟೋರಿಯಂನಲ್ಲಿ ಶನಿವಾರ ನಡೆದ ರೊಟರಿ ಜಿಲ್ಲೆ 3181ರ 2 ದಿನಗಳ ರೋಟರ‍್ಯಾಕ್ಟ್ ಜಿಲ್ಲಾ ಸಮ್ಮೇಳನ ರೊಟೊ ರೆಂಡಿಜ್‌ವೊಸ್ 2018 ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಅಶ್ವಿನ್ ಜೆ. ಪಿರೇರಾ ಮಾತನಾಡಿ ಕೇವಲ ತಂತ್ರಜ್ಞಾನಕ್ಕೆ ಮಾರು ಹೋಗದೆ ಸಮಾಜದ ಕಷ್ಟ ಕಾರ್ಪಣ್ಯಗಳಿಗೂ ಯುವ ಜನತೆ ಸ್ಪಂದಿಸಬೇಕು ಎಂದು ಹೇಳಿದರು.
ಈ ಸಂದರ್ಭ ಬಹುಮುಖ ಪ್ರತಿಭೆ ಧೃತಿ ಕುಲಾಲ್ ಮತ್ತು ಚಿತ್ರ ಕಲಾವಿದೆ ಶಬರಿ ಗಾಣಿಗ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಜಿಲ್ಲೆ 3181 ರ ವಲಯ 1ರ ಸಹಾಯಕ ಗವರ್ನರ್ ಜೊಸ್ಸಿ ಪಿಂಟೋ, ರೋಟರಿ ಜಿಲ್ಲೆ 3181 ರ ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಜಾಕ್ಸನ್ ಸಲ್ಡಾನ್ಹ, ರೋಟರಿ ಜಿಲ್ಲೆ 3182 ರ ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮಂಜುನಾಥ ಕಾರಂತ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವರಿನ್ ಲೋಬೊ, ಕಾರ್ಯದರ್ಶಿ ಸಂತೋಷ್ ಆಚಾರ್ಯ, ರೋಟರ‍್ಯಾಕ್ಟ್ ಸಭಾಪತಿ ಶರತ್ ಶೆಟ್ಟಿ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ವಿಜೇತ್ ಸಿಕ್ವೇರಾ, ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಉಪಸ್ಥಿತರಿದ್ದರು.

ರೊಟರ‍್ಯಾಕ್ಟ್ ಜಿಲ್ಲಾ ಸಮ್ಮೇಳನ ಚಯರ್‌ಮನ್ ಅಶೋಕ್ ಎಸ್. ಸ್ವಾಗತಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-12031806

Comments

comments

Comments are closed.

Read previous post:
Kinnigoli-12031805
ಅತ್ತೂರು ಸುವರ್ಣ ಮೂರ್ತಿ ಮೆರವಣಿಗೆ

ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯರ ಭಂಡಾರಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರ ಪುನಃ ಪ್ರತಿಷ್ಠೆ ಹಾಗೂ ಕಲಶಾಭಿಷೇಕದ ಅಂಗವಾಗಿ ಶನಿವಾರ ಪಕ್ಷಿಕೆರೆ ಪೇಟೆಯಿಂದ ಅತ್ತೂರು ಶ್ರೀ ಅರಸು...

Close