ಕೆಮ್ರಾಲ್ ಹಕ್ಕು ಪತ್ರ ವಿತರಣೆ

ಕಿನ್ನಿಗೋಳಿ : ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದ ಬಡ ವರ್ಗಕ್ಕೆ ಮನೆ ಕಟ್ಟಲು ಹಾಗೂ ಇತರ ಸೌಲಭ್ಯಗಳು ತಾಂತ್ರಿಕ ಸಮಸ್ಯೆಯಾಗಿದ್ದು ಈ 94 ಸಿಸಿ ಯೋಜನೆಯಿಂದ ಹಕ್ಕು ಪತ್ರ ಲಭಿಸಿ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 94 ಸಿ. ಸಿ ಅನ್ವಯ 44 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಮಂಗಳೂರು ತಾ. ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಯ್ಯದ್ದಿ, ಸೇಸಪ್ಪ ಸಾಲ್ಯಾನ್, ಸುರೇಶ್ ದೇವಾಡಿಗ ಪಂಜ, ದೀಪಕ್, ಪ್ರಮೀಳಾ, ಲೀಲಾ ಪೂಜಾರ್ತಿ ಪಿಡಿಒ ರಮೇಶ್ ರಾಥೋಡ್ ಉಪಸ್ಥಿತರಿದ್ದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಎಲ್. ಮಾಣಿಕ್ಯ ಪ್ರಸ್ತಾವನೆಗೈದರು. ಸ್ವಾಗತಿಸಿದರು. ಕೆಮ್ರಾಲ್ ಗ್ರಾಮ ಕರಣಿಕ ಸಂತೋಷ್ ಹಕ್ಕುಪತ್ರ ವಿವರ ನೀಡಿ ಕಾರ್ಯಕ್ರಮ ನಿರೂಪಿಸಿದರು.

Kinnigoli-13031803

Comments

comments

Comments are closed.

Read previous post:
Kinnigoli-13031802
ಯುವ ಸಮುದಾಯ ಉದ್ಯೋಗದಾತರಾಗಬೇಕು

ಕಿನ್ನಿಗೋಳಿ: ಯುವ ಸಮುದಾಯ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಧೃಢರಾಗಿ ಉದ್ಯೋಗದಾತರಾಗಿ ಬೆಳವಣಿಗೆ ಹೊಂದಬೇಕು. ಸೇವಾ ಸಂಸ್ಥೆಗಳು ಅವಕಾಶ ನೀಡುವ ಕೆಲಸ ಮಾಡಬೇಕು ಎಂದು ಮಂಗಳೂರು ನೆಹರು ಯುವ...

Close