ಕಿನ್ನಿಗೋಳಿ : ವಿಶ್ವ ಕ್ಷಯ ರೋಗ ದಿನಾಚರಣೆ

ಕಿನ್ನಿಗೋಳಿ: ಮಹಿಳೆಯರು ಆರ್ಥಿಕ, ಶೈಕ್ಷಣಿಕವಾಗಿ ಸದೃಡರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರಕಾರ ಮಹಿಳಾ ಮೀಸಲಾತಿ ಹಾಗೂ ಇನ್ನಿತರ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಕನ್ಸೆಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಮಗ್ರ ಸಮುದಾಯ ಆರೋಗ್ರ ಕೇಂದ್ರ ಕಿನ್ನಿಗೋಳಿ ಸಂಯೋಜನೆಯಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಭಾಭವನದಲ್ಲಿ ಭಾನುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿಶ್ವ ಕ್ಷಯ ರೋಗ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ ಭಗಿನಿ ಜೋತ್ನಾ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭ ಸಮಾಜ ಸೇವಕರಾದ ಕಮಲ ಹಾಗೂ ಸೆವ್ರಿನ್ ಲೋಬೋ ಅವರನ್ನು ಗೌರವಿಸಲಾಯಿತು.
ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದಿನ್ ಮಾಹಿತಿ ನೀಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್‌ರೈ, ಸಂಜೀವಿನಿ ಸಂಸ್ಥೆ ಸಂಚಾಲಕಿ ಭಗಿನಿ ಹೋಪ್, ಸಮಾಜ ಸೇವಕಿ ಪದ್ಮಿನಿ ವಸಂತ್ ಮತ್ತಿತರರು ಉಪಸ್ಥಿತರಿದ್ದರು.
ಆಶಾಲತಾ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ವಂದಿಸಿದರು.

Kinnigoli-13031801

Comments

comments

Comments are closed.

Read previous post:
Kinnigoli-120318012
ಸ್ವಾಭಿಮಾನದ ಬದುಕು ರಿಕ್ಷಾ ಚಾಲಕರು ಬೆಳೆಸಬೇಕು

ಕಿನ್ನಿಗೋಳಿ: ಸ್ವಯಂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ರಿಕ್ಷಾ ಚಾಲಕರು ಬೆಳೆಸಬೇಕು ರಿಕ್ಷಾ ಚಾಲಕರ ಸಂಘಟನಾ ಶಕ್ತಿಗೆ ಸಮಾಜ ಬೆಂಬಲಿಸಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್...

Close