ಪಾವಂಜೆ : ವಿಶ್ವ ಜಿಗೀಷದ್ ಯಾಗ

ಕಿನ್ನಿಗೋಳಿ : ತ್ಯಾಗದ ಭಾವನೆಗೆ ಯಾಗದ ಪ್ರೇರಣೆ ಸಿಗಲಿ, ರಾಷ್ಟ್ರ ಪ್ರೇಮ ಜಾಗೃತಿಯನ್ನು ಮೂಡಿಸಲು ಸಾಮೂಹಿಕ ಪ್ರಯತ್ನ ಅಗತ್ಯ. ಸಂಘಟನಾ ಶಕ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಯಾಗವನ್ನು ಯಶಸ್ವಿಗೊಳಿಸೋಣ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗದ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಯಾಗದ ಆಮಂತ್ರಣ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.
ಯಾಗದ ಪೂರ್ವ ತಯಾರಿಯಲ್ಲಿ ಎಲ್ಲಾ ಉಪ ಸಮಿತಿಯ ಪ್ರಮುಖರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಯಾಗದ ವಕ್ತಾರ ಡಾ.ಸೋಂದಾ ಭಾಸ್ಕರ ಭಟ್ ಮಾಹಿತಿ ನೀಡಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಮೊಕ್ತೇಸರ ಎಂ. ಶಶೀಂದ್ರಕುಮಾರ್, ದೇವಳದ ಧರ್ಮದರ್ಶಿ ಯಾಜಿ ಡಾ. ಎಚ್. ನಿರಂಜನ ಭಟ್, ಯಾಗ ಸಮಿತಿಯ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಉಪಸ್ಥಿತರಿದ್ದರು.
ಕಚೇರಿ ನಿರ್ವಹಣೆಯ ಪ್ರಧಾನ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಸ್ವಾಗತಿಸಿ, ನಿರೂಪಿಸಿದರು.

Kinnigoli-13031804

Comments

comments

Comments are closed.

Read previous post:
Kinnigoli-13031803
ಕೆಮ್ರಾಲ್ ಹಕ್ಕು ಪತ್ರ ವಿತರಣೆ

ಕಿನ್ನಿಗೋಳಿ : ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದ ಬಡ ವರ್ಗಕ್ಕೆ ಮನೆ ಕಟ್ಟಲು ಹಾಗೂ ಇತರ ಸೌಲಭ್ಯಗಳು ತಾಂತ್ರಿಕ ಸಮಸ್ಯೆಯಾಗಿದ್ದು ಈ 94 ಸಿಸಿ ಯೋಜನೆಯಿಂದ ಹಕ್ಕು ಪತ್ರ ಲಭಿಸಿ...

Close