ಬಪ್ಪನಾಡು ದೇವಳ ಬ್ರಹ್ಮಕಲಶ ಪುಣ್ಯೋತ್ಸವ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ನೇತ್ರತ್ವದಲ್ಲಿ ಮಾರ್ಚ್ 14 ರಿಂದ 24 ರವರೆಗೆ ಅಷ್ಟಬಂಧ ನವೀಕರಣ ಬ್ರಹ್ಮಕಲಶ ಪುಣ್ಯೋತ್ಸವವು ನಡೆಯಲಿದೆ. ಮಾರ್ಚ್ 15 ರಿಂದ ನಿರಂತರ ಅನ್ನ ಸಂತರ್ಪಣೆ, ಫಲಹಾರ ವ್ಯವಸ್ಥೆ, ಸಂಜೆ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾರ್ಚ್ 14 ರ ಬುಧವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ನೆರವೇರಲಿದ್ದು ತೋರಣ ಮುಹೂರ್ತವನ್ನು ಶ್ರೀ ಕ್ಷೇತ್ರ ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀ ನಾರಾಯಣ ಆಸ್ರಣ್ಣ ನೆರವೇರಿಸಿದ್ದಾರೆ. ಉಗ್ರಾಣ ಮುಹೂರ್ತವನ್ನು ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಠೇಲ್ ವೆಂಕಟೇಶ್ ಪುನರೂರು, ಶ್ರೀ ಕ್ಷೇತ್ರ ಕಟೀಲು ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಏಳಿಂಜೆ ಶ್ರೀ ಲಕ್ಷೀ ಜನಾರ್ಧನ ಮಹಾಗಣಪತಿ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೊಂಜಾಲುಗುತ್ತು ಪ್ರಭಾಕರ ಶೆಟ್ಟಿ ಮತ್ತು ಮೂಲ್ಕಿ ಶ್ರೀ ವೆಂಕಟರಮಣ ದೇವಳದ ದರ್ಶನ ಪಾತ್ರಿ ಸತ್ಯನಾರಾಯಣ ನಾಯಕ್ ನೆರವೇರಿಸಲಿದ್ದಾರೆ. 15 ಗುರುವಾರ ಬೆಳಿಗ್ಗೆ ಗಣಯಾಗ, ದುರ್ಗಾ ಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಅಂಕುರಾರೋಹಣ, ದುರ್ಗಾ ನಮಸ್ಕಾರ ಪೂಜೆ, 16 ರ ಶುಕ್ರವಾರ ಬೆಳಿಗ್ಗೆ ಗಣಯಾಗ, ರುದ್ರಯಾಗ, ದುರ್ಗಾಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಕ್ಷೇತ್ರ ಪಾಲ ಗುಡಿಯಲ್ಲಿ ವಾಸ್ತು ಗಣಯಾಗ, ಸಾಂಸ್ಕ್ರತಿಕ ಕಾರ್ಯಕ್ರಮ ಪಟ್ಲ ಸತೀಶ್ ಶೆಟ್ಟಿ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಿದ್ದ ಕಲಾವಿದರಿಂದ ಬೆಳುವಾಯಿ ದೇವಾನಂದ ಭಟ್ ಸಂಯೋಜನೆಯಲ್ಲಿ ಯಕ್ಷ -ನಾಟ್ಯ-ಗಾನ -ವ್ಯೆಭವ ನಡೆಯಲಿದೆ. 17 ರ ಶುಕ್ರವಾರ ಬೆಳಿಗ್ಗೆ ಗಣಯಾಗ, ಮಧ್ಯಾಹ್ನ ಧ್ವಜಾರೋಹಣ, ಶ್ರೀ ದೇವಿ ಮತ್ತು ಸಸಿಹಿತ್ಲು ಭಗವತಿ ಯರ ಭೇಟಿ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಹೊರೆ ಕಾಣಿಕೆ ಸಮರ್ಪಣೆ, ದುರ್ಗಾ ನಮಸ್ಕಾರ ಪೂಜೆ, ಮೂಡಬಿದ್ರಿಯ ಆಳ್ವಾಸ್ ವಿದ್ಯಾ ಸಮೂಹ ಸಂಸ್ಥೆಗಳ ಕಲಾವಿದರಿಂದ ಸಾಂಸ್ಕ್ರತಿಕ ಕಾರ್ಯಕ್ರಮ , ರಾತ್ರಿ ಉತ್ಸವ ಬಲಿ, ಅಷ್ಟ ಬಂಧ ಪ್ರತಿಷ್ಟೆ ನಡೆಯಲಿದೆ. 18 ರ ಬೆಳಿಗ್ಗೆ ಗಣಯಾಗ, ದುರ್ಗಾ ಯಾಗ, ದುರ್ಗಾ ನಮಸ್ಕಾರ ಪೂಜೆ, ಸಂಜೆ ಗಣಪತಿ ದೇವರಿಗೆ ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಸಂಜೆ ಕಾರ್ಕಳ ಶ್ರೀ ವೆಂಕಟರಮಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಮಂಗಳೂರಿನ ನಟನಂ ನೃತ್ಯಾಲಯ ಅಕಾಡೆಮಿಯವರಿಂದ ಭರತನಾಟ್ಯ ಕಾರ್ಯಕ್ರಮ, ಕೆರೆಕಾಡು ಶ್ರೀ ವಿನಾಯಕ ಯಕ್ಷ ಕಲಾ ತಂಡದಿಂದ “ಕನಕಾಂಗಿ ಕಲ್ಯಾಣ-ವೀರ ಅಭಿಮನ್ಯು” ಯಕ್ಷಗಾನ ಪ್ರದರ್ಶನ. ರಾತ್ರಿ ಉತ್ಸವ ಬಲಿ ನಡೆಯಲಿದೆ. 19 ರ ಸೋಮವಾರ ಬೆಳಿಗ್ಗೆ ಗಣಪತಿ ದೇವರಿಗೆ ಕಲಶಾಭಿಷೇಕ, ಸಂಜೆ ಮಂಡಲ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಕೆ ಮುರಳೀಧರ ಉಡುಪಿ ಮತ್ತು ವಿದುಷಿ ಶೀಲಾ ದಿವಾಕರ್ ಮಂಗಳೂರು ಅವರಿಂದ ಸ್ವರ-ಸಂಭ್ರಮ, ವಿದ್ವಾನ್ ವಿಜಯೀಂದ್ರ ಆಚಾರ್ಯ ಮ್ಯೆಸೂರು “ದೇವಿ ಗೀತೆ ಹಾಗೂ ಭಗವದ್ಗೀತೆ” ಕುರಿತು ಧಾರ್ಮಿಕ ಪ್ರವಚನ, ಅಜಯ್ ವಾರಿಯರ್ ಮ್ಯೆಸೂರು ಬಳಗದಿಂದ ಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. 20 ರ ಬೆಳಿಗ್ಗೆ ದುರ್ಗಾಯಾಗ, ಸಂಜೆ ದುರ್ಗಾ ನಮಸ್ಕಾರ ಪೂಜೆ, ಉತ್ಸವ ಬಲಿ, ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಅರೆಹೊಳೆ ಪ್ರತಿಷ್ಟಾನದ ನಂದಗೋಕುಲ ಕಲಾವಿದರಿಂದ “ಗಾನ-ನೃತ್ಯ-ವ್ಯೆಭವ”, ಉಡುಪಿ ಶತವಾಧಾನಿ ವಿದ್ವಾನ್ ರಮಾನಾಥ ಆಚಾರ್ಯರಿಂದ “ದೇವಿ ಉಪಾಸನೆ” ಕುರಿತು ಧಾರ್ಮಿಕ ಪ್ರವಚನ, ಮೂಲ್ಕಿ ಬಂಟರ ಸಂಘದ ಯುವ ವಿಭಾಗದಿಂದ “ಸತ್ಯದ ಸಿರಿ” ಸಾಂಸ್ಕ್ರತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಸಂಜೆ ನಾಗ ದೇವರಿಗೆ ಕಲಶಾಭಿವಾಸ, ಸ್ವಯಂವರ ಪಾರ್ವತಿ ಪೂಜೆ, ಉತ್ಸವ ಬಲಿ, ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶರತ್ ಹಳೆಯಂಗಡಿ ಮತ್ತು ಬಳಗದಿಂದ ವಾದ್ಯ ಸಂಗೀತ, ಮಂಗಳೂರಿನ ಆಚಾರ್ಯ ಮಠದ ಪಂಡಿತ್ ನರಸಿ.ಹ ಆಚಾರ್ಯರಿಂದ “ನವ ದುರ್ಗೆಯರು” ಕುರಿತು ಧಾರ್ಮಿಕ ಪ್ರವಚನ, ಮಂಗಳೂರಿನ ಸನಾತನ ನಾಟ್ಯಾಲಯದವರಿಂದ “ನುಡಿ-ನಾದ-ನಾಟ್ಯಾಮೃತದ ಪುಣ್ಯ ಭೂಮಿ ಭಾರತ” ಕಾರ್ಯಕ್ರಮ, ರಾತ್ರಿ ಪೂಜೆ ನಡೆಯಲಿದೆ. 22 ರ ಬೆಳಿಗ್ಗೆ ನಾಗ ಸನ್ನಿಧಿಯಲ್ಲಿ ತಿಲ ಹೋಮ, ಧಾರ್ಮಿಕ ವಿಧಿ ವಿಧಾನಗಳು, ಸಂಜೆ 25 ದ್ರವ್ಯಮಿಳಿತ ಕಲಶ ಸಹಿತ ಬ್ರಹ್ಮ ಕಲಶಾಭಿವಾಸ, ಅಶ್ಲೇಷಾ ಬಲಿ, ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಬಜಪೆಯ ಥಂಡರ್ ಗೈಸ್ ಡ್ಯಾನ್ಸ್ ಅಕಾಡೆಮಿಯವರಿಂದ ಭಕ್ತಿಪ್ರಧಾನ ನೃತ್ಯ ಕಾರ್ಯಕ್ರಮ, ಕಟೀಲು ಡಾ ಸೋಂದಾ ಭಾಸ್ಕರ ಭಟ್ ರಿಂದ ” ದೇವಾಲಯಗಳ ಹಿನ್ನೆಲೆ ಮತ್ತು ಮುನ್ನೆಲೆ” ಕುರಿತು ಧಾರ್ಮಿಕ ಪ್ರವಚನ, ಮುಂಬಾಯಿ ಕಲಾ ಸೌರಭದವರಿಂದ “ಡ್ಯಾನ್ಸ್ ದ ಡೆನ್ನ-ಡೆನ್ನಾ” ಭಕ್ತಿ ಭಾವ ಜಾನಪದ ಗಾಯನ, ನರ್ತನದ ವೈವಿಧ್ಯ ಕಾರ್ಯಕ್ರಮ ಜರಗಲಿದೆ. 23 ರ ಶುಕ್ರವಾರ ಬೆಳಿಗ್ಗೆ 5.45ಕ್ಕೆ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ ಬ್ರಹ್ಮಶ್ರೀ ಪುತ್ತೂರು ಮಧುಸೂಧನ ತಂತ್ರಿತೊಟ್ಟಂ,ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ “ಬ್ರಹ್ಮ ಕುಂಭಾಭಿಷೇಕ” ನಡೆಯಲಿದೆ. ಮಧ್ಯಾಹ್ನ ಮಹಾ ಪೂಜೆ, ರಥಾರೋಹಣ, ಹಗಲು ರಥೋತ್ಸವ, ಪಲ್ಲ ಪೂಜೆ, ಮಹಾ ಅನ್ನ ಸಂತರ್ಪಣೆ, ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮ ನಾದಸ್ವರ ವಿಶಾರದ ವಿದ್ವಾನ್ ನಾಗೇಶ್ ಎ ಬಪ್ಪನಾಡು ರಿಂದ ನಾದಸ್ವರ ಕಚೇರಿ, ಕುದ್ರೊಳಿ ಗಣೇಶ್ ಹಾಗೂ ಬಳಗದವರಿಂದ “ವಿಸ್ಮಯ ಜಾದೂ” ಕಾರ್ಯಕ್ರಮ, ಸಂಜೆ ಉತ್ಸವ ಬಲಿ, ರಾತ್ರಿ ಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ. 24 ರ ಶನಿವಾರ ಬೆಳಿಗ್ಗೆ ಕವಾಟೋದ್ಘಾಟನೆ, ಮಹಾ ಪೂಜೆ, ಸಂಜೆ ಯಾತ್ರಾ ಬಲಿ, ಓಕುಳಿ, ಪೇಟೆ ಸವಾರಿ, ರಾತ್ರಿ ಶ್ರೀದೇವಿ ಹಾಗೂ ಶ್ರೀ ಭಗವತಿಯ ಭೇಟಿಯಾದ ಬಳಿಕ ಮಹಾ ರಥೋತ್ಸವ, ಅವಭೃತ, ಜಳಕದ ಬಲಿ, ಧ್ವಜಾವರೋಹಣ, ಪ್ರಸನ್ನ ಪೂಜೆ ನೆರವೇರಲಿದೆ. 25 ರ ಆದಿತ್ಯವಾರ ಬೆಳಿಗ್ಗೆ ದುರ್ಗಾಯಾಗ, ಮಹಾ ಸಂಪ್ರೋಕ್ಷಣೆ, ಪ್ರಸಾದ ವಿತರಣೆ ನಡೆಯಲಿದೆಯೆಂದು ದೇವಳದ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Mulki-13031806
ಅಷ್ಟಬಂಧ ನವೀಕರಣ, ಬ್ರಹ್ಮಕಲಶ ಪುಣ್ಯೋತ್ಸವ

ಮುಲ್ಕಿ: ಅಷ್ಟಬಂಧ ನವೀಕರಣ, ಬ್ರಹ್ಮಕಲಶ ಪುಣ್ಯೋತ್ಸವ

Close