ಪಾವಂಜೆ : ಉಗ್ರಾಣ ಮುಹೂರ್ತ

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಅನ್ನ ಪ್ರಸಾದ ನೀಡಿದಲ್ಲಿ ಕ್ಷೇತ್ರದ ಸಾನ್ನಿಧ್ಯತೆ ಹಾಗೂ ಪಾವಿತ್ರ್ಯತೆ ಹೆಚ್ಚುತ್ತದೆ. ಎಂದು ಸಾಮಾಜಿಕ ಧಾರ್ಮಿಕ ನೇತಾರ ಕಡಂಬೋಡಿ ಮಹಾಬಲ ಪೂಜಾರಿ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಎಪ್ರೀಲ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವಕ್ಕಾಗಿ ಬುಧವಾರ ನಡೆದ ಉಗ್ರಾಣ ಮುಹೂರ್ತ ನೆರವೇರಿಸಿ ಮಾತನಾಡಿದರು.
ದೇವಳದ ಧರ್ಮದರ್ಶಿ ಯಾಜಿ ಡಾ.ಎಚ್.ನಿರಂಜನ್ ಭಟ್ ಅವರು ಉಗ್ರಾಣದಲ್ಲಿ ನಿರ್ಮಿಸಿರುವ ಉಗ್ರಾಣ ದೇವತೆ ಧಾನ್ಯಲಕ್ಷ್ಮೀ ವಿದ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿ ಅನ್ನದಾನ ಸಮಿತಿಯ ಮಂಡಲ ಪ್ರಧಾನ ಚಂದ್ರಶೇಖರ್ ನಾನಿಲ್ ಹಾಗೂ ಧಾನ್ಯಕೋಶ ಮಂಡಳಿಯ ಮಂಡಲ ಪ್ರಧಾನ ಪೀತಾಂಬ ಹೆರಾಜೆ ಅವರಿಗೆ ಜವಬ್ದಾರಿ ಹಂಚಿದರು.
ಯಾಗದ ಪ್ರಮುಖರಾದ ಚಿಕ್ಕಮಗಳೂರಿನ ವೇದಕೃಷಿಕ ಕೆ.ಎಸ್.ನಿತ್ಯಾನಂದ ಅವರು ಆಶೀರ್ವಚನ ನೀಡಿ ಯಾಗದ ಮಾಹಿತಿಯನ್ನು ನೀಡಿದರು.
ದೇವಳದ ಆಡಳಿತ ಮೊಕ್ತೇಸರ ಎಂ.ಶಶೀಂದ್ರಕುಮಾರ್, ಅನ್ನದಾನ ನಿರ್ವಹಣೆಯ ಪ್ರಮುಖರಾದ ಮುರಳೀಧರ ರಾವ್, ವಿವಿಧ ಸಮಿತಿಯ ಮುರ ಸದಾಶಿವ ಶೆಟ್ಟಿ, ಬಿ.ಗಣೇಶ್ ಕುಡ್ವ, ಸುಕುಮಾರ್ ಬೊಳ್ಳೂರು, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ್, ರಜನಿ ದುಗ್ಗಣ್ಣ, ನಕ್ರೆ ಬಾಲಕೃಷ್ಣ ರಾವ್, ಮಾಧವ ಕೆರೆಕಾಡು, ಸುಧಾಕರ ಆರ್. ಅಮೀನ್, ಉದಯ ಬಿ.ಸುವರ್ಣ ಸಸಿಹಿತ್ಲು, ರಮೇಶ್ ಕೋಟ್ಯಾನ್, ಜಗನ್ನಾಥ ಕರ್ಕೇರ, ರಾಜೇಶ್ ಕೆರೆಕಾಡು, ಧರ್ಮಾನಂದ ಶೆಟ್ಟಿಗಾರ್, ವಿನೋದ್‌ಕುಮಾರ್ ಕೊಳುವೈಲು, ಉಮೇಶ್ ಪೂಜಾರಿ ಪಡುಪಣಂಬೂರು, ಸದಾನಂದ ಗಾಂಭೀರ್, ವಾಸುದೇವ ಶೆಣೈ, ಶೋಭೇಂದ್ರ ಸಸಿಹಿತ್ಲು, ಅಶೋಕ್ ಸಸಿಹಿತ್ಲು, ಮೋಹನ್ ಭಟ್ ಹಳೆಯಂಗಡಿ, ಪುನೀತ್ ಕೃಷ್ಣ ಮೂಲ್ಕಿ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಾಲಯದ ಮಂಡಲ ಪ್ರಧಾನ ವಿನೋದ್ ಎಸ್. ಸಾಲ್ಯಾನ್ ಸ್ವಾಗತಿಸಿದರು.

Kinnigoli-14011808

Comments

comments

Comments are closed.

Read previous post:
Mulki-14011803
ಬಪ್ಪನಾಡು ದೇವಳದಲ್ಲಿ ಬ್ರಹ್ಮಕಲಶೋತ್ಸವ

ಮೂಲ್ಕಿ: ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ದಿ ಸಮಿತಿಯ ನೇತ್ರತ್ವದಲ್ಲಿ ಬುಧವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ ನೆರವೇರಲಿದ್ದು ತೋರಣ ಮುಹೂರ್ತವನ್ನು...

Close