ಕಿನ್ನಿಗೋಳಿ : ಭಾರತ ಸರಕಾರದ ದತ್ತೋಪಂತ್ ರೇಂಗಡಿ ರಾಷ್ಟ್ರೀಯ ಅಭಿವೃದ್ದಿ ಮಂಡಳಿಯ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಹಾಗೂ ಕಿನ್ನಿಗೋಳಿ ಅನಂತಪ್ರಕಾಶ ಟ್ರಸ್ಟ್ ಸಹಕಾರದಲ್ಲಿ ಕೊಡೆತ್ತೂರು ಸಂಕಯಬೆನ್ನಿ ವಠಾರದಲ್ಲಿ ಎರಡು ದಿನಗಳ ಕಾಲ ಕೃತಕ ಆಭರಣ ತಯಾರಿ ಶಿಬಿರ ನಡೆಯಿತು. ಪ್ರಕಾಶ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಸಿಡಾಕ್ನ ತರಬೇತುದಾರ ಸತೀಶ್ ಮಾಬೆನ್ ಗ್ರಾಮೀಣ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ಸರಕಾರದ ಯೋಜನೆಗಳ ವಿವರ ನೀಡಿದರು.
ಈ ಸಂದರ್ಭ ಕಾರ್ಮಿಕ ಶಿಕ್ಷಣಾಭಿವೃದ್ಧಿ ಮಂಡಳಿಯ ಸತೀಶ್ ಕುಮಾರ್, ಕರಕುಶಲ ತರಬೇತಿದಾರರಾದ ಹರಿಣಿ ಜೆ. ರಾವ್, ಅಪೋಲಿನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ದಾಮೋದರ ಶೆಟ್ಟಿ, ಅನಂತ ಪ್ರಕಾಶ ಟ್ರಸ್ಟ್ನ ಗಾಯತ್ರೀ ಎಸ್. ಉಡುಪ ಮತ್ತಿತರರು ಉಪಸ್ಥಿತರಿದ್ದರು.