ಅದ್ಭುತ ಜನಪದೀಯ ಹಿನ್ನೆಲೆ ಬಪ್ಪನಾಡು

ಮೂಲ್ಕಿ: ಪುರಾತನ ದೇವಾಲಯವಾಗಿರುವ ಶ್ರೀ ಕ್ಷೇತ್ರ ಬಪ್ಪನಾಡಿಗೆ ಅದ್ಭುತ ಜನಪದೀಯ ಹಿನ್ನೆಲೆಯಿದೆ.ಬಪ್ಪನಾಡು ಡೋಲು,ಪ್ರಕೃತಿ ಸಹಜವಾದ ಲಿಂಗ ಪ್ರಧಾನ ಇದಕ್ಕೆ ಉದಾಹರಣೆ ಎಂದು ಜಾನಪದ ಸಂಶೋಧಕ ಹಾಗೂ ಸಾಹಿತಿ ಕೆ.ಎಲ್.ಕುಂಡಂತಾಯ ಹೇಳಿದರು.
ಬ್ರಹ್ಮಕಲಶ ಸಂಭ್ರಮದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ದೇವಾಲಯಗಳಿಗೆ ಜಾನಪದ ಮೂಲವಿದೆ.ಪ್ರತಿಯೊಂದು ದೇವಳಗಳ ಹೊರಪದರದ ಮೂಲ ಆರಾಧನಾ ಪದ್ಧತಿ,ಒಳಪದರದ ಜಾನಪದ ಮನಸ್ಸುಗಳನ್ನು ಕಾಣಬಹುದು.ಬಪ್ಪನಾಡಿನಲ್ಲಿ ಡೋಲಿನೊಂದಿಗೆ ಡೋಲು ಬಡಿಯುವವರೂ ಪ್ರಧಾನರು ಎಂಬ ನಂಬಿಕೆಯಿದೆ.ಶಿಷ್ಟ ಸಂಸ್ಕೃತಿ,ಜನಪದ ಸಂಸ್ಕೃತಿ ಬಪ್ಪನಾಡಿನಲ್ಲಿ ಸಿಗುವಷ್ಟು ಬೇರೆಲ್ಲೂ ಸಿಗದು ಎಂದು ಕುಂಡಂತಾಯ ಹೇಳಿದರು.
ಬಪ್ಪನಾಡು ಡೋಲು ಎಂದು ಪ್ರತೀತಿಯ ಶ್ರೀ ಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಕಿಲ್ಪಾಡಿಯ ಕುಡುಪರವರು ಬಪ್ಪನಾಡಿನ ಬೃಹತ್ ಡೋಲನ್ನು ಬಡಿಯುವ ಮೂಲಕ ಉದ್ಘಾಟಿಸಿದರು.
ಪುತ್ತೂರುಬಾವ ಮೋಹನದಾಸ ಶೆಟ್ಟಿ,ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಧರ್ಮದರ್ಶಿ ಯಾಜಿ ನಿರಂಜನ ಭಟ್,ಮಾನಂಪಾಡಿ ಶ್ರೀ ವೀರಭದ್ರ ಮಹಾಮ್ಮಾಯಿ ದೇವಳದ ಆಡಳಿತ ಮೊಕ್ತೇಸರ ಪುರಂದರ ಡಿ.ಶೆಟ್ಟಿಗಾರ್,ಗೇರುಕಟ್ಟೆ ಸುಕುಮಾರ್,ದೇವಳದ ಅನುವಂಶಿಕ ಹಾಗೂ ಆಡಳಿತ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ,ಕಾರ್ಯನಿರ್ವಹಣಾಕಾರಿ ಜಯಮ್ಮ ಪಿ.,ಬ್ರಹ್ಮಕಲಶ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ ಬಪ್ಪನಾಡು,ಕಾರ್ಯಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ,ಉಪಾಧ್ಯಕ್ಷರುಗಳಾದ ಕರುಣಾಕರ ಶೆಟ್ಟಿ ಬಾಳದಗುತ್ತು ಮತ್ತು ಹರಿಶ್ಚಂದ್ರ ವಿ.ಕೋಟ್ಯಾನ್,ಕಾರ್ಯಕ್ರಮ ಪ್ರಾಯೋಜಕರಾದ ಎಮ್.ಯದುನಾರಾಯಣ ಶೆಟ್ಟಿ ಮುಂಬೈ,ಸಂಯೋಜಕ ಎಮ್.ದೇವಾನಂದ ಭಟ್,ಸಾಂಸ್ಕೃತಿಕ ಸಮಿತಿಯ ಸಂಚಾಲಕ ಚಂದ್ರಶೇಖರ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿದರು.ಸಮಿತಿಯ ಸದಸ್ಯ ಸಂತೋಷ್ ಕುಮಾರ್ ಹೆಗ್ಡೆ ಪ್ರಸ್ತಾವಿಸಿದರು.ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತು ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Mulki-17031801 Mulki-17031802

Comments

comments

Comments are closed.

Read previous post:
Bappanadu18031832
ಬಪ್ಪನಾಡು ಅತಿಥಿಗೃಹ ಉದ್ಘಾಟನೆ

ಮೂಲ್ಕಿ : ನಮ್ಮ ದೋಷ ದುರಿತಗಳನ್ನು ದೂರ ಮಾಡುವ ಶಕ್ತಿಯೆನಿಸುವ ದೇವರ ಮುಂದೆ ನಮ್ಮ ಮನಸ್ಸು ಒಂದಾಗಬೇಕು. ಸಮಾಜ ಒಗ್ಗಟ್ಟಾಗಿ ದೇವಾಲಯಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜವನ್ನು, ಜನರ...

Close