ಕಟೀಲು ಮಿತ್ತಬೈಲು ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಬೈಲು ರಸ್ತೆಗೆ ರೂ. 50ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟು ರಸ್ತೆ ಕಾಮಗಾರಿಗೆ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಗುದ್ದಲಿಪೂಜೆ ನೆರವೇರಿಸಿದರು.
ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಶೆಟ್ಟಿ, ಸ್ಥಳೀಯ ಮುಖಂಡರಾದ ತಿಮ್ಮಪ್ಪ ಕೋಟ್ಯಾನ್, ರಮಾನಂದ ಪೂಜಾರಿ, ಧನಂಜಯ ಮಟ್ಟು, ಮೂಡಾ ಸದಸ್ಯ ವಸಂತ ಬೆರ್ನಾಡ್, ನವೀನ್ ಕುಮಾರ್, ಕೃಷ್ಣಪ್ಪ ಅಂಚನ್, ಪುರುಷೋತ್ತಮ ಕೋಟ್ಯಾನ್, ವಿನೋದ್ ಅಂಚನ್, ಸೀತಾರಾಮ ಪೂಜಾರಿ, ವಿಜಯ ಕಟೀಲು, ಶಶಿಧರ ಶೆಟ್ಟಿ, ಗಣೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli17031804

 

Comments

comments

Comments are closed.

Read previous post:
Kinnigoli17031803
ಎಂಬ್ರೊಡರಿ ತರಗತಿಯ ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಮಹಿಳೆಯರು ಇಂದಿನ ಪರಿಸ್ಥಿತಿಯಲ್ಲಿ ವಿವಿಧ ರೀತಿಯ ಕರಕುಶಲ ಹಾಗೂ ಸ್ವ ಉದ್ಯೋಗದ ಬಗ್ಗೆ ಒಳ್ಳೆಯ ಮಾಹಿತಿಯನ್ನು ಪಡೆದು, ಸಮಾಜದಲ್ಲಿ ಉತ್ತಮ ಸತ್ಕಾರ್ಯವನ್ನು ಮಾಡಿ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತಿದ್ದಾರೆ...

Close