ಬಪ್ಪನಾಡು ಅತಿಥಿಗೃಹ ಉದ್ಘಾಟನೆ

ಮೂಲ್ಕಿ : ನಮ್ಮ ದೋಷ ದುರಿತಗಳನ್ನು ದೂರ ಮಾಡುವ ಶಕ್ತಿಯೆನಿಸುವ ದೇವರ ಮುಂದೆ ನಮ್ಮ ಮನಸ್ಸು ಒಂದಾಗಬೇಕು. ಸಮಾಜ ಒಗ್ಗಟ್ಟಾಗಿ ದೇವಾಲಯಗಳ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜವನ್ನು, ಜನರ ಮನಸ್ಸನ್ನು ಒಂದಾಗಿಸುವ ಉದ್ದೇಶವೇ ದೇಗುಲಗಳದ್ದು. ಉತ್ಸವ ಬ್ರಹ್ಮಕಲಶೋತ್ಸವಗಳ ಉದ್ದೇಶ ಕೂಡ ಅದುವೇ ಆಗಿದೆ ಎಂದು ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶ ಪುಣ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಬಪ್ಪನಾಡು ದೇಗುಲದ ಮುಂಭಾಗದಲ್ಲಿ ಪಾರ್ವತೀ ಬಾಬು ಶೆಟ್ಟಿ ಸ್ಮರಣಾರ್ಥ ನಿರ್ಮಿಸಲ್ಪಟ್ಟ ಅತಿಥಿಗೃಹವನ್ನು ಡಾ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಭಟ್ ಎಂ.ಎಸ್. ಮಾತನಾಡಿ ಎಲ್ಲರೂ ದೇಗುಲಗಳಲ್ಲಿ ನಡೆಯುವ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ‍್ಯಗಳಲ್ಲಿ ತೊಡಗಿಸಿಕೊಂಡಾಗ ಅಲ್ಲಿನ ಸಾನ್ನಿಧ್ಯವೃದ್ಧಿಯೂ ಹೆಚ್ಚುತ್ತದೆ ಎಂದರು.
ಶಾಸಕ ಅಭಯಚಂದ್ರ ಮಾತನಾಡಿ ಸಾಮರಸ್ಯಕ್ಕೆ ಬಪ್ಪನಾಡು ಕ್ಷೇತ್ರ ಮಾದರಿಯಾಗಿದೆ. ವಿದೇಶಗಳಿಗೆ ಉದ್ಯೋಗ ನಿಮಿತ್ತ ಮುಂಬೈ, ದುಬೈ ಹೀಗೆ ದೇಶ ವಿದೇಶಗಳಿಗೆ ಹೋಗಿರುವ ತುಳುನಾಡಿನ ಜನರು ತಮ್ಮ ಊರಿನ ದೈವ ದೇವಸ್ಥಾನಗಳ ಅಭಿವೃದ್ದಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದರು.
ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು.
ಮೂಡುಬಿದ್ರೆಯ ಡಾ. ಮೋಹನ ಆಳ್ವ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ  ಎಂ. ಕೆ. ಪ್ರಮೀಳಾ, ಕಟೀಲು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರು ಸನತ್ ಕುಮಾರ್ ಶೆಟ್ಟಿ, ಉದ್ಯಮಿ ಯದುನಾರಾಯಣ ಶೆಟ್ಟಿ, ಡಾ. ಪ್ರಭಾ ಶೆಟ್ಟಿ, ಪನಿಕೆರೆ ಜಗದೀಶ ಪ್ರಭು, ರೇಶ್ಮಾ ರವಿರಾಜ್, ಪ್ರೇಮಲತಾ ರಾಜೀವ ಬಂಗೇರ, ಸುಂದರ ಆಚಾರ್ಯ, ಹರೀಶ ಶೆಟ್ಟಿ ಐಕಳ, ಅಮರನಾಥ ಶೆಟ್ಟಿ, ದೇಗುಲದ ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಎನ್. ಎಸ್. ಮನೋಹರ ಶೆಟ್ಟಿ, ದುಗ್ಗಣ್ಣ ಸಾವಂತರು, ಪಾದಮನೆ ಜಯಂತ ರೈ, ಜಯಮ್ಮ ಪಿ, ನಾರಾಯಣ ಶೆಟ್ಟಿ, ಶೇಖರ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.
ಸಮಿತಿಯ ಕಾರ‍್ಯದರ್ಶಿ ಸುನಿಲ್ ಆಳ್ವ ಸ್ವಾಗತಿಸಿದರು. ಸಂತೋಷ್ ಕುಮಾರ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
ಬಳಿಕ ಆಳ್ವಾಸ್ ವಿದ್ಯಾ ಸಮೂಹ ಸಂಸ್ಥೆಗಳ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.
ಇಂದು ತಾ.18ರಂದು ಗಣಯಾಗ, ಗಣಪತಿ ದೇವರಿಗೆ ಕಲಶಾಧಿವಾಸ, ನಟನಂ ನಾಟ್ಯಾಲಯ ಅಕಾಡಮಿಯವರಿಂದ ಭರತನಾಟ್ಯ, ಕೆರೆಕಾಡು ಮಕ್ಕಳ ಮೇಲದವರಿಂದ ಯಕ್ಷಗಾನ ನಡೆಯಲಿದೆ.
Bappanadu18031831 Bappanadu18031832

Comments

comments

Comments are closed.

Read previous post:
Kinnigoli-14011808
ಪಾವಂಜೆ : ಉಗ್ರಾಣ ಮುಹೂರ್ತ

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಅನ್ನ ಪ್ರಸಾದ ನೀಡಿದಲ್ಲಿ ಕ್ಷೇತ್ರದ ಸಾನ್ನಿಧ್ಯತೆ ಹಾಗೂ ಪಾವಿತ್ರ್ಯತೆ ಹೆಚ್ಚುತ್ತದೆ. ಎಂದು ಸಾಮಾಜಿಕ ಧಾರ್ಮಿಕ ನೇತಾರ ಕಡಂಬೋಡಿ ಮಹಾಬಲ ಪೂಜಾರಿ ಹೇಳಿದರು....

Close