ಪಾವಂಜೆ ಒಂದು ತಿಂಗಳು ದಿನಂಪ್ರತಿ ಯಕ್ಷಗಾನ

ಕಿನ್ನಿಗೋಳಿ : ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಎ. ೧೦ರಿಂದ ೧೭ರತನಕ ನಡೆಯಲಿರುವ ವಿಶ್ವ ಜಿಗೀಷದ್ ಯಾಗ ಹಾಗೂ ಬ್ರಹ್ಮಕಲಶೋತ್ಸವಾಂಗ ಇಂದಿನಿಂದ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ ೬ರಿಂದ ೮.೩೦ರತನಕ ಯಕ್ಷಗಾನ ನಡೆಯಲಿದೆ.
ಇಂದು ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಬಲಿಪ ನಾರಾಯಣ ಭಾಗವತರು, ಪೆರುವೋಡಿ ನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ, ಪಾತಾಳ ವೆಂಕಟರಮಣ ಭಟ್, ಸೀಮಂತೂರು ನಾರಾಯಣ ಶೆಟ್ಟಿ, ವೇದಕೃಷಿಕ ಕೆ.ಎಸ್. ನಿತ್ಯಾನಂದ, ಕಿಶನ್ ಹೆಗ್ಡೆ, ಗಣೇಶ ಕೊಲಕಾಡಿಯವರ ಉಪಸ್ಥಿತಿಯಲ್ಲಿ ಯಕ್ಷಗಾನಾರಾಧನೆ ಉದ್ಘಾಟನೆಗೊಳ್ಳಲಿದೆ.
4ಗಂಟೆಯಿಂದ ಸಂಗೀತ ಆರಾಧನೆ ನಡೆಯಲಿದೆ.
ಇಂದು ಭಾರ್ಗವ ವಿಜಯ ನಾಳೆ ತಾ. 16 ರಂದು ಭಕ್ತ ಪ್ರಹ್ಲಾದ ಯಕ್ಷಗಾನ ನಡೆಯಲಿದೆ. ಒಂದು ತಿಂಗಳ ಕಾಲ ನಡೆಯಲಿರುವ ಯಕ್ಷಗಾನಾರಾಧನೆಯಲ್ಲಿ ಐನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.

Comments

comments

Comments are closed.

Read previous post:
Mulki-17031801
ಅದ್ಭುತ ಜನಪದೀಯ ಹಿನ್ನೆಲೆ ಬಪ್ಪನಾಡು

ಮೂಲ್ಕಿ: ಪುರಾತನ ದೇವಾಲಯವಾಗಿರುವ ಶ್ರೀ ಕ್ಷೇತ್ರ ಬಪ್ಪನಾಡಿಗೆ ಅದ್ಭುತ ಜನಪದೀಯ ಹಿನ್ನೆಲೆಯಿದೆ.ಬಪ್ಪನಾಡು ಡೋಲು,ಪ್ರಕೃತಿ ಸಹಜವಾದ ಲಿಂಗ ಪ್ರಧಾನ ಇದಕ್ಕೆ ಉದಾಹರಣೆ ಎಂದು ಜಾನಪದ ಸಂಶೋಧಕ ಹಾಗೂ ಸಾಹಿತಿ ಕೆ.ಎಲ್.ಕುಂಡಂತಾಯ...

Close