ಬಿರ್ನಕೋಡಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಸಿದ್ದರಾಮಯ್ಯ ಸರಕಾರ ಜನಪರ ಯೋಜನೆಯ ಮೂಲಕವಾಗಿ ಶಾಸಕ ಅಭಯಚಂದ್ರ ಜೈನ್ ಅವರ ಮುತುವರ್ಜಿಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿಕೊಟ್ಟಿದ್ದಾರೆ ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರ್ನಕೋಡಿ ರಸ್ತೆಗೆ 10 ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ , ಚಂದ್ರ ಶೇಖರ್, ಅರುಣ್ ಕುಮಾರ್, ಜಾನ್ಸನ್ ಜೆರೋಮ್ ಡಿಸೋಜ, ಸುನೀತಾ ರೋಡ್ರಿಗಸ್, ಗ್ರಾಮಸ್ಥರಾದ ಸೈಮನ್, ಪ್ರಕಾಶ್ ಡಿಸೋಜ, ಹನೀಫ್, ಗುತ್ತಿಗೆದಾರ ಟಿ. ಹನೀಫ್, ನವೀನ್ ಡಿಸೋಜ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-20031801

Comments

comments

Comments are closed.

Read previous post:
ಎ. 8 : ಕೋಳಿ ಹರಕೆ ಸೇವೆ

ಕಿನ್ನಿಗೋಳಿ : ಮೂರು ಕಾವೇರಿ ಶ್ರೀ ಮಹಮ್ಮಾಯೀ ದೇವಳದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯವರ ಕೋಳಿ ಹರಕೆ ಸೇವೆ ವರ್ಷಂಪ್ರತಿ ಕಟೀಲು ರಾಶಿ ಪೂಜೆಯ ನಂತರದ ಮೊದಲ ಭಾನುವಾರ ನಡೆಯುತ್ತಿದ್ದು ಈ...

Close