ಸ್ವಚ್ಚತೆಯ ಜಾಗೃತಿ ಮೂಡಿಸಬೇಕು

ಕಿನ್ನಿಗೋಳಿ : ಶಿಕ್ಷಣದಲ್ಲಿ ಸ್ವಚ್ಚತೆಯ ಪಾಠವನ್ನು ಅಳವಡಿಸಿ, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಹಾಗಾದಾಗ ಭವಿಷ್ಯದಲ್ಲಿ ಉತ್ತಮ ಪರಿಸರ ಕಾಣಲು ಸಾಧ್ಯ ಎಂದು ಡಾ.ಎಂ.ವಿ.ಶೆಟ್ಟಿ ಕಾಲೇಜು ಉಪನ್ಯಾಸಕಿ ನಿವೇದಿತಾ ಕಾಮತ್ ಹೇಳಿದರು.
ಹಳೆಯಂಗಡಿ ಮುಖ್ಯ ಪೇಟೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ಡಾ.ಎಂ.ವಿ.ಶೆಟ್ಟಿ ಕಾಲೇಜು ಆಶ್ರಯದಲ್ಲಿ ನಡೆದ ಸ್ವಚ್ಚತಾ ಕಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಸ್ವಚ್ಚತೆಯ ಬಗ್ಗೆ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾವೇ ಸ್ಯಯಂ ಪ್ರೇರಿತರಾಗಿ ಸ್ವಚ್ಚತೆಯಾಗಿರಿಸಿದಲ್ಲಿ ಸ್ವಚ್ಚ ಪರಿಸರದ ಬದಲಾವಣೆ ತರಲು ಸಾಧ್ಯ ಎಂದರು.
ಹಳೆಯಂಗಡಿ ಮುಖ್ಯ ಪೇಟೆಯಲ್ಲಿ ಡಾ.ಎಂ.ವಿ.ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.
ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ವಿನೋದ್‌ಕುಮಾರ್ ಕೊಳುವೈಲು, ಅಬ್ದುಲ್ ಅಝೀಝ್, ಸುಕೇಶ್ ಪಾವಂಜೆ, ಹಮೀದ್ ಸಾಗ್, ಬಶೀರ್, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಕೇಶವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-21031803

Comments

comments

Comments are closed.

Read previous post:
Kinnigoli-21031802
ಕೇಂದ್ರ ಸರಕಾರದ ಯೋಜನೆ ಮರೆಮಾಚಬೇಡಿ

ಕಿನ್ನಿಗೋಳಿ : ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರ ಮರೆಮಾಚಬಾರದು, 84 ವಿವಿಧ ಯೋಜನೆಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಸಮಾನಾಂತರವಾಗಿ ವಿನಿಮಯವಾಗುತ್ತಿದೆ. ರಾಜ್ಯಕ್ಕೆ ಯುಪಿಎ ಸರಕಾರ ಇದ್ದಾಗ 11 ಸಾವಿರ...

Close