ದಲಿತರ ಅಭಿವೃಧ್ದಿಗೆ ಸಿದ್ದರಾಮಯ್ಯ ಪಣ

ಕಿನ್ನಿಗೋಳಿ : ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದ ನಂತರ ಪ.ಜಾತಿ ಮತ್ತು ಪಂಗಡದ ಅಭಿವೃದ್ದಿಗೆ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಗೂ ಪ.ಜಾತಿ ಮತ್ತು ಪಂಗಡ ಕಾಲೊನಿಗಳ ಮೂಲಭೂತ ಸೌಕರ್ಯಕ್ಕಾಗಿ ಬಹು ದೊಡ್ಡ ಮೊತ್ತವನ್ನು ಕಾದಿರಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಪಾಣರ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಿ ಮಾತಾನಾಡಿದರು.
2 ಲಕ್ಷ ವೆಚ್ಚದಲ್ಲಿ ವಿವಿಧ ಶೈಕ್ಷಣಿಕ ಹಂತದಲ್ಲಿರುವ ಒಟ್ಟು 58 ಪ.ಜಾತಿ/ಪ.ಪಂಗಡದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ವಸಂತ ಬೆರ್ನಾಡ್, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಖಾದರ್, ಶರ್ಮಿಳಾ ಎಸ್ ಕೋಟ್ಯಾನ್, ಚಿತ್ರಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21031805

Comments

comments

Comments are closed.

Read previous post:
Kinnigoli-21031804
ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ : ಪ್ರಾಚೀನ ಕಾಲದಲ್ಲಿಯೂ ಹೆಣ್ಣಿಗೆ ಸ್ಥಾನ ಮಾನ್ಯತೆ ಇತ್ತು, ಮಹಿಳೆ ಸುಶಿಕ್ಷಿತಳಾಗಿ ಸುಸಂಸ್ಕೃತರಾಗಿ ಬೆಳೆಯಬೇಕು ಎಂದು ಮಣಿಪಾಲ ಉಡುಪಿ ಯುಜಿಟಿ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಪಕ್ಷಿಕೆರೆ ಹೇಳಿದರು. ತೋಕೂರು...

Close