ಕೇಂದ್ರ ಸರಕಾರದ ಯೋಜನೆ ಮರೆಮಾಚಬೇಡಿ

ಕಿನ್ನಿಗೋಳಿ : ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರ ಮರೆಮಾಚಬಾರದು, 84 ವಿವಿಧ ಯೋಜನೆಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಸಮಾನಾಂತರವಾಗಿ ವಿನಿಮಯವಾಗುತ್ತಿದೆ. ರಾಜ್ಯಕ್ಕೆ ಯುಪಿಎ ಸರಕಾರ ಇದ್ದಾಗ 11 ಸಾವಿರ ಕೋ. ರೂ. ಕೇಂದ್ರ ಸರಕಾರ ನೀಡಿದ್ದರೆ ಈಗ ನರೇಂದ್ರ ಮೋದಿ ಸರಕಾರ 2 ಲಕ್ಷ ಕೋ. ರೂಗಳನ್ನು ಈಗಾಗಲೇ ನೀಡಿದೆ. ಅಭಿವೃದ್ಧಿಯಲ್ಲಿ ರಾಜಕೀಯ ನಡೆಸದೇ ಚುನಾವಣಾ ಸಮಯದಲ್ಲಿ ಮಾತ್ರ ರಾಜಕಾರಣ ನಡೆಸಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಸಸಿಹಿತ್ಲುವಿನಲ್ಲಿ ರಾಷ್ಟ್ರೀಯ ಬಿರುಗಾಳಿ ವಿಪತ್ತು ಕುಗ್ಗಿಸುವ ಯೋಜನೆ (ಎನ್‌ಸಿಆರ್‌ಎಂಪಿ)ಯ ಅಡಿಯಲ್ಲಿ 4.5 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟೀಕರಣ ರಸ್ತೆಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯರಾದ ಜೀವನ್ ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು, ನಿರ್ದೇಶಕ ಹಿಮಕರ್ ಪುತ್ರನ್, ಬಿಜೆಪಿಯ ಈಶ್ವರ ಕಟೀಲು, ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ, ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಸುದರ್ಶನ್, ಸಂತೋಷ್ ಶೆಟ್ಟಿ, ಸುಖೇಶ್ ಶೆಟ್ಟಿ ಶಿರ್ತಾಡಿ, ಅಭಿಲಾಷ್ ಶೆಟ್ಟಿ, ಆನಂದ ಸುವರ್ಣ, ಧನ್‌ರಾಜ್, ಉದಯ ಬಿ. ಸುವರ್ಣ, ಶಂಕರ ಬಂಗೇರ, ನಾರಾಯಣ ಕರ್ಕೇರ, ಶಿವರಾಜ್ ಸಾಲ್ಯಾನ್, ಮುಖೇಶ್ ಕರ್ಕೇರ, ಸೋಮಶೇಖರ, ಅನಿಲ್ ಕುಂದರ್, ಸೂರ್ಯ ಕಾಂಚನ್, ಸುಭಾಷ್ ಕರ್ಕೇರ, ಕಮಲಕ್ಷ, ನಿತಿನ್ ಕುಕ್ಯಾನ್, ವಿನೋದ್‌ಕುಮರ್, ಸವಿತಾ ಸಾಲ್ಯಾನ್, ತಿಲಕಾಕ್ಷಿ, ವನಜಾ, ಲಲಿತಾ, ಮಾನಸ, ಕುಮಾರ್, ದೀಪೇಶ್‌ರಾಜ್, ಸೂರಜ್ ಪುತ್ರನ್, ಸಚಿನ್, ರಮೇಶ್, ಭಾಸ್ಕರ್, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ವಿನೋದ್ ಕೊಳುವೈಲು, ಅಶೋಕ್ ಬಂಗೇರ, ಸುಕೇಶ್ ಪಾವಂಜೆ, ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು, ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್, ಮೀನುಗಾರಿಕಾ ಪ್ರಕೋಷ್ಠದ ಸಂಚಾಲಕ ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.

Kinnigoli-21031802

Comments

comments

Comments are closed.

Read previous post:
Kinnigoli-21031801
25 ನೇ ವರ್ಷದ – ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ : ಯಾವುದೇ ಒಂದು ಕಾರ್ಯಕ್ರಮವನ್ನು ಪ್ರಾರಂಬಿಸುದು ಮುಖ್ಯವಲ್ಲ ಅದನ್ನು ಮುಂದುವರಿಕೊಂಡು ಹೋಗುದು ಮುಖ್ಯ, ಸರ್ವ ಸದಸ್ಯರ ಸಹಕಾರದಲ್ಲಿ ನಮ್ಮ ಸಂಘ 25 ವರ್ಷಗಳಿಂದ ನಿರಂತರ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಂಡು...

Close