ಮೂಲ್ಕಿ ರಾಹುಲ್ ಗಾಂಧಿ ರೋಡ್ ಶೋ

ಮೂಲ್ಕಿ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದ.ಕ.ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿ ದ.ಕ.ಜಿಲ್ಲೆಯ ಗಡಿ ಭಾಗವಾಗಿರುವ ಮೂಲ್ಕಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಗತಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂಲ್ಕಿ ಆರಾರ್ ಟವರ‍್ಸ್ ಬಳಿ ಬಸ್ಸಿನಲ್ಲಿ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಮೂಡಬಿದ್ರಿ ಕ್ಷೇತ್ರದ ಶಾಸಕ ಕೆ ಅಭಯಚಂದ್ರ ಜ್ಯೆನ್ ಹಾರ ಹಾಕಿ ಸ್ವಾಗತಿಸಿದರು.
ಅಲ್ಲಿಂದ ಬಸ್ಸಿನಲ್ಲಿ ನೆರೆದಿದ್ದ ಜನ ಸಮೂಹದತ್ತ ಕೈ ಬೀಸುತ್ತಾ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದವರೆಗೆ ರೋಡ್ ಶೋ ನಡೆಸಿದರು. ಬಸ್ಸಿನಲ್ಲಿ ಅವರೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಿ ಕೆ ಶಿವ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಮತ್ತಿತರ ನಾಯಕರು ಇದ್ದರು.
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಮೂಲ್ಕಿಯಲ್ಲಿ ಮಧ್ಯಾಹ್ನ 2.30 ರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಉಡುಪಿ ಜಿಲ್ಲೆಯ ಹೆಜಮಾಡಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿದ ಬಳಿಕ ಹೆಜಮಾಡಿಯಿಂದ ಮೂಲ್ಕಿಗೆ 3.40 ಕ್ಕೆ ಆಗಮಿಸಿದ್ದರು. ಮೂಡಬಿದ್ರಿ, ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸೇರಿದಂತೆ ಮೂಲ್ಕಿ ಹೋಬಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಮಿಸಿದ್ದು ಸುಮಾರು 10000 ಮಂದಿ ಆಗಮಿಸಿದ್ದರು. 500 ಕ್ಕೂ ಮಿಕ್ಕಿ ಪೊಲೀಸರು ಬಂದೊಬಸ್ತ್ ಕಾರ್ಯದಲ್ಲಿ ನಿರತರಾಗಿದ್ದರು. ರಾಷ್ಟ್ರೀಯ ಹೆದ್ದಾರಿಯು ಮಧ್ಯಾಹ್ನ 2.30 ರಿಂದ ನಿರಂತರವಾಗಿ ಬ್ಲಾಕ್ ಆಗಿದ್ದು ಸಂಜೆಯವರೆಗೂ ಹೆದ್ದಾರಿಯಲ್ಲಿ ವಾಹನಗಳ ಸರತಿ ಸಾಲು ಕಂಡು ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರ‍್ಯೆ, ದ.ಕ.ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ವೆಂಕಟೇಶ್, ಶಾಸಕ ಕೆ ಅಭಯಚಂದ್ರ ಜ್ಯೆನ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ‍್ಯೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ಯಾಲೆಟ್ ಪಿಂಟೋ, ಮೂಡಬಿದ್ರಿ ಬ್ಲಾಕ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಂಜಯ ಮಟ್ಟು, ಕಾರ್ಯದರ್ಶಿ ಬಿ ಎಂ ಆಸೀಫ್, ಮೂಡಾ ಸದಸ್ಯ ವಸಂತ ಬೆರ್ನಾಡ್, ಮೂಲ್ಕಿ ನಗರ ಪಂಚಾಯತ್ ಸದಸ್ಯರಾದ ವಿಮಲಾ ಕೋಟ್ಯಾನ್, ಪುತ್ತುಬಾವು, ಬಶೀರ್ ಕುಳಾಯಿ, ಯೋಗೀಶ್ ಕೋಟ್ಯಾನ್, ಸಂದೀಪ್ ಚಿತ್ರಾಪು ಸೇರಿದಂತೆ ಪಕ್ಷದ ನಾಯಕರುಗಳು ಮೂಲ್ಕಿಯಲ್ಕಿ ಉಪಸ್ಥಿತರಿದ್ದರು.
ಮಂಗಳೂರು ಪೋಲೀಸ್ ಆಯುಕ್ತ ಟಿ ಆರ್ ಸುರೇಶ್ ನೇತ್ರತ್ವದಲ್ಲಿ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.

Kinnigoli-21031808 Kinnigoli-21031809 Kinnigoli-210318010 Kinnigoli-210318011 Kinnigoli-210318012 Kinnigoli-210318013

Comments

comments

Comments are closed.

Read previous post:
Kinnigoli-21031807
ಸಸಿಹಿತ್ಲು ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ

ಕಿನ್ನಿಗೋಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಖಂಡ ಭಾರತದ ಪರಿಕಲ್ಪನೆಯ ಪ್ರತಿಜ್ಞೆ ಮಾಡಿದವರು ವಿದೇಶಗಳ ಸಂಬಂಧಗಳು ಹಾಗೂ ಆಡಳಿತದ ವೇಗ ಕೇಂದ್ರ ಸರಕರದಿಂದ ಆಗುತ್ತಿದೆ ಎಂದು ದ.ಕ. ಸಂಸದ...

Close