ಸಸಿಹಿತ್ಲು-ಕದಿಕೆ ಸೇತುವೆ ಉದ್ಘಾಟನೆ

ಕಿನ್ನಿಗೋಳಿ : ಗ್ರಾಮೀಣ ಭಾಗವು ನಗರಕ್ಕೆ ಸಂಪರ್ಕ ಹೊಂದಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಸಿದ್ದರಾಮಯ್ಯನವರ ನೇತ್ರತ್ವದ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ರಸ್ತೆ,ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಿದ್ದು ಕಳೆದ 5 ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. .
ಹಳೆಯಂಗಡಿಯ ಕದಿಕೆಯಲ್ಲಿ ಲೋಕೋಪಯೋಗಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೂಲಕ ನಬಾರ್ಡ್‌ನ ಯೋಜನೆಯ ಮೂಲಕ 7 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಹಳೆಯಂಗಡಿ-ಕದಿಕೆ-ಸಸಿಹಿತ್ಲು ಸೇತುವೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ ವರ್ಷಗಳ ಹಿಂದೆ ಸಸಿಹಿತ್ಲುವಿಗೆ ಬರಬೇಕಾದರೆ ಮುಕ್ಕದ ಮೂಲಕ ಆಗಮಿಸಬೇಕಾಗಿದ್ದು ಇದೀಗ ಕದಿಕೆಯಲ್ಲಿ ಹಳೆಯಂಗಡಿ -ಸಸಿಹಿತ್ಲು ಸಂಪರ್ಕ ಕಲ್ಪಿಸಲು ನೂತನವಾಗಿ ನಿರ್ಮಿಸಿದ ಸೇತುವೆಯಿಂದಾಗಿ ಮೂಲ್ಕಿ ಹಳೆಯಂಗಡಿ ಪರಿಸರದವರಿಗೆ ಸಸಿಹಿತ್ಲು ತುಂಬಾ ಹತ್ತಿರವಾಗಿದೆ ಎಂದು ತಿಳಿಸಿದರು.
ಸಸಿಹಿತ್ಲು ಸಾರಂತಾಯ ಗರೋಡಿಯ ಕಾಂತು ಲಕ್ಕಣ ಯಾನೆ ಯಾದವ ಪೂಜಾರಿ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಅಪ್ಪು ಯಾನೇ ಶ್ರೀನಿವಾಸ ಪೂಜಾರಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮೂಡಾದ ಸದಸ್ಯ ವಸಂತ ಬೆರ್ನಾಡ್, ಕರಾವಳಿ ಅಭಿವೃದ್ದಿ ಪ್ರಾಕಾರದ ಸದಸ್ಯ ಸಾಹುಲ್ ಹಮೀದ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮನ್ಸೂರ್ ಸಾಗ್, ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಮಾಲತಿ ಕೋಟ್ಯಾನ್, ಚಂದ್ರಕುಮಾರ್, ಗುಣವತಿ, ಅಬ್ದುಲ್ ಅಝೀಝ್, ಅನಿಲ್, ಹಮೀದ್ ಸಾಗ್, ಬಶೀರ್ ಸಾಗ್, ಪಡುಪಣಂಬೂರು ಗ್ರಾ.ಪಂ. ಸದಸ್ಯ ಉಮೇಶ್ ಪೂಜಾರಿ, ವಾಮನ ಇಡ್ಯಾ, ದಯಾನಂದ, ಚಂದ್ರ ,ರಾಜೇಶ್ ಹಳೆಯಂಗಡಿ, ಸಸಿಹಿತ್ಲು ಬಿಲ್ಲವ ಸಂಘದ ಧನ್‌ರಾಜ್ ಕೋಟ್ಯಾನ್, ಮೆಸ್ಕಾಂ ಸಲಹಾ ಸಮಿತಿಯ ಧರ್ಮಾನಂದ ಶೆಟ್ಟಿಗಾರ್, ರವಿ ಕೊಳುವೈಲು, ಎಸ್.ಕೆ.ಅಬ್ದುಲ್ ರಜಾಕ್, ರಮೇಶ್ ಸುವರ್ಣ, ಶಶೀಂದ್ರ ಸಾಲ್ಯಾನ್, ಸವಿತಾ ಬೆಳ್ಳಾಯರು, ಪ್ರಕಾಶ್ ಆಚಾರ್, ದಾಮೋದರ ಸುವರ್ಣ, ವಾಮನ ಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-21031806

Comments

comments

Comments are closed.

Read previous post:
Kinnigoli-21031805
ದಲಿತರ ಅಭಿವೃಧ್ದಿಗೆ ಸಿದ್ದರಾಮಯ್ಯ ಪಣ

ಕಿನ್ನಿಗೋಳಿ : ಸಿದ್ದರಾಮಯ್ಯ ನೇತೃತ್ವದ ಸರಕಾರ ಬಂದ ನಂತರ ಪ.ಜಾತಿ ಮತ್ತು ಪಂಗಡದ ಅಭಿವೃದ್ದಿಗೆ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಗೂ ಪ.ಜಾತಿ ಮತ್ತು ಪಂಗಡ ಕಾಲೊನಿಗಳ ಮೂಲಭೂತ ಸೌಕರ್ಯಕ್ಕಾಗಿ ಬಹು ದೊಡ್ಡ...

Close