ಸಸಿಹಿತ್ಲು ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ

ಕಿನ್ನಿಗೋಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಖಂಡ ಭಾರತದ ಪರಿಕಲ್ಪನೆಯ ಪ್ರತಿಜ್ಞೆ ಮಾಡಿದವರು ವಿದೇಶಗಳ ಸಂಬಂಧಗಳು ಹಾಗೂ ಆಡಳಿತದ ವೇಗ ಕೇಂದ್ರ ಸರಕರದಿಂದ ಆಗುತ್ತಿದೆ ಎಂದು ದ.ಕ. ಸಂಸದ ನಳಿನ್‌ಕುಮಾರ್ ಹೇಳಿದರು. .
ಭಾನುವಾರ ಸಸಿಹಿತ್ಲು ಉತ್ಥಾನ ಬಳಗದ ಸಭಾಂಗಣದಲ್ಲಿ ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿಯ ಸಂಯೋಜನೆಯಲ್ಲಿ ನಡೆದ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಮಾತನಾಡಿದರು.
14ನೇ ಹಣಕಾಸಿನ ಯೋಜನೆಯಡಿಯಲ್ಲಿ ಪ್ರತೀ ಗ್ರಾಮ ಪಂಚಾಯಿತಿಗಳಿಗೆ ವರ್ಷಕ್ಕೆ 1 ಕೋಟಿ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ 3 ಕೋಟಿ ಎಲ್‌ಪಿಜಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. 15000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಜನೌಷದಿ ಯೋಜನೆ, ವಿಮ ಸೌಲಭ್ಯ ನೀಡಲಾಗಿದೆ. ಕಳೆದ 4 ವರ್ಷಗಳಲ್ಲಿ 84 ಯೋಜನೆಗಳು ಕಾರ್ಯಗತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಸಾವಿರ ಕೋ.ರೂ.ಗಳ ಅನುದಾನವನ್ನು ವಿನಿಯೋಗಿಸಲಾಗಿದೆ. ಕಾಂಗ್ರೆಸ್ ಶಾಸಕರುಗಳು ಇದನ್ನು ಅರಗಿಸಿಕೊಳ್ಳಲಾಗದೇ, ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಜನರ ಮನಸ್ಸಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ತರಲು ಶ್ರಮಿಸಬೇಕು ಎಂದರು.
ಈ ಸಂದರ್ಭ ಕಾಂಗ್ರೇಸ್ ಮತ್ತಿತರ ಪಕ್ಷಗಳಿಂದ ನಾರಾಯಣ, ಹರೀಶ್, ಮುಖೇಶ್ ಕರ್ಕೆರ, ಅಬ್ದುಲ್ ರಹಿಮಾನ್, ರಷೀದ್, ಹಮೀದ್, ಕಿರಣ್‌ಕುಮಾರ್, ಪ್ರದೀಪ್ ಮತ್ತಿತರರನ್ನು ಬಿಜೆಪಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ದ.ಕ ಬಿಜೆಪಿ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಮುಲ್ಕಿ ಮೂಡಬಿದ್ರೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಈಶ್ವರ್ ಕಟೀಲ್, ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸುದರ್ಶನ್ ಎಂ. ಬಿಜೆಪಿ ಮುಖಂಡರಾದ ಸತೀಶ್ ಭಟ್ ಕೊಳುವೈಲ್, ಕೆ. ಭುವನಾಭಿರಾಮ ಉಡುಪ, ಕೆ.ಪಿ. ಜಗದೀಶ್ ಅಧಿಕಾರಿ, ಜಗನ್ನಾಥ್ ಶೆಟ್ಟಿ ನಿಡ್ಡೋಡಿ ಚಾವಡಿಮನೆ, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಶರತ್ ಕುಬೆಯೂರು, ಯುವಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಕಿನ್ನಿಗೋಳಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್ ಶೆಟ್ಟಿ, ಅಶೋಕ್ ಸುಕೇಶ್, ಆನಂದ್, ವಿನೋದ್ ಕೊಳುವೈಲ್, ಧನರಾಜ್, ರಾಮಚಂದ್ರ ಸನಿಲ್, ಕಿನ್ನಿಗೋಳಿ ಶಕ್ತಿ ಕೇಂದ್ರ ಶಂಕರ ಬಂಗೇರ, ಉದಯ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಹಳೆಯಂಗಡಿ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್ ವಂದಿಸಿದರು, ಮೀನುಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶೋಭೇಂದ್ರ ಸಸಿಹಿತ್ಲು ನಿರೂಪಿಸಿದರು.

Kinnigoli-21031807

Comments

comments

Comments are closed.

Read previous post:
Kinnigoli-21031806
ಸಸಿಹಿತ್ಲು-ಕದಿಕೆ ಸೇತುವೆ ಉದ್ಘಾಟನೆ

ಕಿನ್ನಿಗೋಳಿ : ಗ್ರಾಮೀಣ ಭಾಗವು ನಗರಕ್ಕೆ ಸಂಪರ್ಕ ಹೊಂದಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಸಿದ್ದರಾಮಯ್ಯನವರ ನೇತ್ರತ್ವದ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ರಸ್ತೆ,ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ...

Close