ಪೊಂಜೊವುಲೆನ ತುಡರ ಪರ್ಬ

ಕಿನ್ನಿಗೋಳಿ : ಪ್ರಾಚೀನ ಕಾಲದಲ್ಲಿಯೂ ಹೆಣ್ಣಿಗೆ ಸ್ಥಾನ ಮಾನ್ಯತೆ ಇತ್ತು, ಮಹಿಳೆ ಸುಶಿಕ್ಷಿತಳಾಗಿ ಸುಸಂಸ್ಕೃತರಾಗಿ ಬೆಳೆಯಬೇಕು ಎಂದು ಮಣಿಪಾಲ ಉಡುಪಿ ಯುಜಿಟಿ ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಪಕ್ಷಿಕೆರೆ ಹೇಳಿದರು.
ತೋಕೂರು ಕಂಬಳಬೆಟ್ಟು ಶ್ರೀದೇವಿ ಮಹಿಳಾ ಮಂಡಲದ ವಠಾರದಲ್ಲಿ ಶ್ರೀ ದೇವಿ ಮಹಿಳಾ ಮಂಡಲ, ಕಂಬಳಬೆಟ್ಟು ತೋಕೂರು ಇದರ ಸಹಯೋಗದಲ್ಲಿ ನಡೆದ ಪೊಂಜೊವುಲೆನ ತುಡರ ಪರ್ಬ ಕಾರ್ಯಕ್ರಮದಲ್ಲಿ ಕೂಡು ಕುಟುಂಬದಲ್ಲಿ ಹೆಣ್ಣು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಎಮ್‌ಆರ್‌ಪಿಎಲ್ ಸೀನಿಯರ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಗೃಹ ಕೈಗಾರಿಕಾ ಪರಿಣತೆ ಗುಲಾಬಿ ಪುನರೂರು ಅವರನ್ನು ಗೌರವಿಸಲಾಯಿತು. 83 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಪಕ್ಷಿಕೆರೆ ಚರ್ಚ್ ಸಹಾಯಕ ಧರ್ಮ ಗುರು ಫಾ. ಕ್ಲಿಫಾರ್ಡ್ ಪಿಂಟೋ, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಕಿನ್ನಿಗೋಳಿ ವನಿತಾ ಸಮಾಜದ ಮಾಜಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ, ಶ್ರೀದೇವಿ ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾಲಕ್ಷ್ಮೀ ಭಟ್ ಸ್ವಾಗತಿಸಿದರು. ಶಶಿಕಲಾ ಬಂಗೇರ ವರದಿ ವಾಚಿಸಿದರು. ಶಾಂತಾ ಕರ್ಕೇರ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ವಿವರ ತಿಳಿಸಿದರು.

Kinnigoli-21031804

Comments

comments

Comments are closed.

Read previous post:
Kinnigoli-21031803
ಸ್ವಚ್ಚತೆಯ ಜಾಗೃತಿ ಮೂಡಿಸಬೇಕು

ಕಿನ್ನಿಗೋಳಿ : ಶಿಕ್ಷಣದಲ್ಲಿ ಸ್ವಚ್ಚತೆಯ ಪಾಠವನ್ನು ಅಳವಡಿಸಿ, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಹಾಗಾದಾಗ ಭವಿಷ್ಯದಲ್ಲಿ ಉತ್ತಮ ಪರಿಸರ ಕಾಣಲು ಸಾಧ್ಯ ಎಂದು ಡಾ.ಎಂ.ವಿ.ಶೆಟ್ಟಿ ಕಾಲೇಜು ಉಪನ್ಯಾಸಕಿ ನಿವೇದಿತಾ ಕಾಮತ್ ಹೇಳಿದರು....

Close