ಸಸಿಹಿತ್ಲು : ಮೀನುಗಾರಿಕಾ ಜೆಟ್ಟಿ ನಿರ್ಮಾಣ

ಕಿನ್ನಿಗೋಳಿ ; ಸಸಿಹಿತ್ಲು ಪರಿಸರದ ಮೀನುಗಾರಿಗೆ ಮೀನುಗಾರಿಕಾ ಜೆಟ್ಟಿಯು ಉಪಯುಕ್ತವಾಗಲಿದೆ. ಸಸಿಹಿತ್ಲು ಪ್ರದೇಶವು ಅಭಿವೃದ್ಧಿ ಹೊಂದಲು ಕಳೆದ ನಾಲ್ಕು ವರ್ಷದಿಂದ ನಿರಂತರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಕರಾವಳಿಯ ಮೀನುಗಾರಿಗೆ ವೃತ್ತಿಗೆ ಸಹಕಾರ ನೀಡುವ ಜವಾಬ್ದಾರಿ ಸರಕಾರದ್ದಾಗಿದೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಸಿಹಿತ್ಲುವಿನಲ್ಲಿ ಬಂದರು ಮತ್ತು ಮೀನುಗಾರಿಕಾ ಉಪ ವಿಭಾಗದಿಂದ 4.5 ಕೋ. ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೀನುಗಾರಿಕಾ ಜೆಟ್ಟಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಸಿಹಿತ್ಲು ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಪಾಣಾರ್, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ. ಸದಸ್ಯರಾದ ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಮಾಲತಿ ಕೋಟ್ಯಾನ್, ಚಂದ್ರಕುಮಾರ್, ಗುಣವತಿ, ಅಬ್ದುಲ್ ಅಝೀಝ್, ಅನಿಲ್, ಹಮೀದ್ ಸಾಗ್, ಬಶೀರ್ ಸಾಗ್, ಮಾಜಿ ತಾ.ಪಂ. ಮನ್ಸೂರ್ ಸಾಗ್, ಉದ್ಯಮಿ ಶಶೀಂದ್ರ ಎಂ. ಸಾಲ್ಯಾನ್, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಸಸಿಹಿತ್ಲು ಬಿಲ್ಲವ ಸಂಘದ ಧನ್‌ರಾಜ್ ಕೋಟ್ಯಾನ್, ಮೆಸ್ಕಾಂ ಸಲಹಾ ಸಮಿತಿಯ ಧರ್ಮಾನಂದ ಶೆಟ್ಟಿಗಾರ್, ಸ್ಥಳೀಯರಾದ ರವಿ ಕೊಳುವೈಲು, ಎಸ್.ಕೆ.ಅಬ್ದುಲ್ ರಜಾಕ್, ರಮೇಶ್ ಸುವರ್ಣ, ಸವಿತಾ ಬೆಳ್ಳಾಯರು, ಚಂದ್ರಶೇಖರ ಕದಿಕೆ, ಇಂಜಿನಿಯರ್ ಪ್ರವೀಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೀನುಗಾರಿಕಾ ಜೆಟ್ಟಿ…
ಬಂದರು ಮತ್ತು ಮೀನಿಗಾರಿಕಾ ಉಪ ವಿಭಾಗದಿಂದ 4.5 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾದ ಮೀನಿಗಾರಿಕಾ ಜೆಟ್ಟಿಯು 102 ಮೀ. ಉದ್ದವಿದ್ದು, 360 ಮೀ.ಉದ್ದದ ಸಂಪರ್ಕದ ಕಾಂಕ್ರೀಟೀಕರಣ ರಸ್ತೆ. 2150 ಚದರ ಅಡಿಯ ಬಲೆ ನೇಯುವ ಶೆಡ್‌ಗಳು ಒಳಗೊಂಡಿದೆ.

Kinnigoli-22031801

Comments

comments

Comments are closed.

Read previous post:
Kinnigoli-210318015
ಜೋಡುಬೈಲು ಬಾಬಕೋಡಿ ರಸ್ತೆ ಕಾಂಕ್ರೀಟೀಕರಣ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುಬೈಲು ಬಾಬಕೋಡಿ ರಸ್ತೆ ಕಾಂಕ್ರೀಟೀಕರಣಕ್ಕೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಡಿಸೋಜ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ...

Close