ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಒತ್ತು

ಕಿನ್ನಿಗೋಳಿ : ಮೋದಿಯವರು ಪ್ರಧಾನ ಮಂತ್ರಿಯಾದ ನಂತರ ದೇಶದ ಚಿತ್ರಣವೇ ಬದಲಾಗಿದೆ. ಗ್ರಾಮೀಣ ಪ್ರದೇಶದ ರಸ್ತೆ ಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ವಿಧಾನ ಪರಿಷ್ಯತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಬುಧವಾರ ವಿಧಾನ ಪರಿಷತ್‌ನ 5 ಲಕ್ಷ, ಜಿಲ್ಲಾ ಪಂಚಾಯಿತಿಯ 3 ಲಕ್ಷ, ತಾಲೂಕು ಪಂಚಾಯಿತಿಯ 1 ಲಕ್ಷ, ಮತ್ತು ಪಡುಪಣಂಬೂರು ಗ್ರಾಮ ಪಂಚಾಯತಿ 1.5 ಲಕ್ಷ ಅನುದಾನದಿಂದ ನಿರ್ಮಾಣಗೊಂಡ ಬೆಳ್ಳಾಯರು ಕೆರೆಕಾಡು ಎಸ್.ಟಿ ಕಾಲನಿ ರಸ್ತೆ ಕಾಂಕ್ರಿಟೀಕರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಪಡುಪಣಂಬೂರು ಪಂಚಾಯತಿ ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಶ್ವೇತ, ದ.ಕ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಲಕ್ಷ್ಮಣ ಸಾಲ್ಯಾನ್, ದಿನೇಶ್ ಹರಿಪಾದೆ, ಸತೀಶ್ ಚಿಲಿಂಬಿ, ದಿವ್ಯೇಶ್ ದೇವಾಡಿಗ, ಪಿ.ಆರ್ ರಾಜೇಶ್ ಕೆರೆಕಾಡು, ಗಣೇಶ್ ದೇವಾಡಿಗ, ರಾಘವೇಂದ್ರ ಬಂಜನ್, ರಾಜೇಶ್ ದೇವಾಡಿಗ, ಯೋಗೀಶ್, ಪ್ರವೀಣ್ ಕೋಟ್ಯಾನ್, ಕೃಷ್ಣ ಶೆಟ್ಟಿ, ಸತೀಶ್ ಆಚಾರ್ಯ, ರತ್ನಾವತಿ, ಶಿವಾನಂದ, ಟಿ. ಆರ್ ರವೀಂದ್ರ, ಎಂ. ಆರ್. ಗೀತಾ, ಮತ್ತಿತರರು ಉಪಸ್ಥಿತರಿದ್ದರು.

Kinnigoli-23031801

Comments

comments

Comments are closed.

Read previous post:
Kinnigoli-22031801
ಸಸಿಹಿತ್ಲು : ಮೀನುಗಾರಿಕಾ ಜೆಟ್ಟಿ ನಿರ್ಮಾಣ

ಕಿನ್ನಿಗೋಳಿ ; ಸಸಿಹಿತ್ಲು ಪರಿಸರದ ಮೀನುಗಾರಿಗೆ ಮೀನುಗಾರಿಕಾ ಜೆಟ್ಟಿಯು ಉಪಯುಕ್ತವಾಗಲಿದೆ. ಸಸಿಹಿತ್ಲು ಪ್ರದೇಶವು ಅಭಿವೃದ್ಧಿ ಹೊಂದಲು ಕಳೆದ ನಾಲ್ಕು ವರ್ಷದಿಂದ ನಿರಂತರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಕರಾವಳಿಯ...

Close