ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ

ಕಿನ್ನಿಗೋಳಿ: ಪ್ರಜಾಪ್ರಭುತ್ವದ ಬೇರುಗಳು ಸಮಾಜದಲ್ಲಿ ಪರಿಣಾಮಕಾರಿಯಾಗಿ ನೆಲೆಗೊಳ್ಳಲು ನವ ಮತದಾರರು ಮತದಾನದ ಪಾವಿತ್ರ್ಯತೆ ಮತ್ತು ಪ್ರಜಾಪ್ರಭುತ್ವದ ಅರಿವನ್ನು ಪ್ರಾರಂಭದಿಂದಲೇ ಆಳವಾಗಿ ಅರಿಯುವ ಅಗತ್ಯವಿದೆ ಎಂದು ಶ್ರೀ ಧವಳ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸಂತೋಷ್ ಶೆಟ್ಟಿ ಹೇಳಿದರು.
ಪೊಂಪೈ ಕಾಲೇಜು, ಐಕಳದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಯೂತ್ ರೆಡ್ ಕ್ರಾಸ್ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಮಾತನಾಡಿ ಉನ್ನತ ಶಿಕ್ಷಣ ಪಡೆಯುತ್ತಿರುವ ನವಮತದಾರರು ವಿವಿಧ ದಿನಪತ್ರಿಕೆಗಳು ಮತ್ತು ವೃತ್ತಪತ್ರಿಕೆಗಳನ್ನು ಸೂಕ್ಷ್ಮವಾಗಿ ನಿತ್ಯ ಅವಲೋಕಿಸಿ ಪ್ರಜಾಪ್ರಭುತ್ವ ಮೌಲ್ಯಗಳಾದ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಕುರಿತು ಜ್ಞಾನವನ್ನು ಸಂಪಾದಿಸುವ ಮೂಲಕ ಪ್ರಬುದ್ಧ ಮತದಾರರಾಗಿ ಪ್ರಜಾಪ್ರಭುತ್ವವನ್ನು ಹೆಚ್ಚು ಪ್ರಸ್ತುತಗೊಳಿಸಬೇಕು ಎಂದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಜಗದೀಶ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಪ್ರೊ. ಸಿಲ್ವಿಯ ಪಾಯ್ಸ್ ಮತ್ತು ಕಾಲೇಜಿನ ನ್ಯಾಕ್ ಸಂಯೋಜನಾಧಿಕಾರಿ ಪ್ರೊ. ಯೋಗಿಂದ್ರ ಬಿ., ಪೂಜ ಬಿ., ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕರಾದ ವಿಶಾಲ್ ಬಿ. ಕುಲಾಲ್, ವರ್ಷಿಣಿ ಹಾಗು ಯುವ ರೆಡ್ ಕ್ರಾಸ್ ಘಟಕದ ನಾಯಕಿ ತ್ರಿಷ ಉಪಸ್ಥಿತರಿದ್ದರು.
ಮೇಘಶ್ರೀ ಸ್ವಾಗತಿಸಿದರು. ಪ್ರಜ್ವಲ್ ಕುಲಾಲ್ ವಂದಿಸಿದರು. ಶ್ರೇಯ ಎಸ್. ಕಾರ್ಯಕ್ರಮ ನಿರೂಪಿಸಿದರು.

Kinnigoli-23031802

Comments

comments

Comments are closed.