ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕಿನ್ನಿಗೋಳಿ : ಕುಡಿಯುವ ನೀರು ಶುದ್ದವಾಗಿದ್ದರೆ ನಮ್ಮ ಆರೋಗ್ಯಕ್ಕೆ ಉತ್ತಮ. ಸಿದ್ದರಾಮಯ್ಯ ಸರಕಾರದ ಅನ್ನಭಾಗ್ಯ, ಕ್ಷೀರ ಭಾಗ್ಯದ ಜೊತೆ ಇದು ಕೂಡ ಯಶಸ್ವಿ ಯೋಜನೆಯಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡಿನಲ್ಲಿ ದಕ್ಷಿಣ ಕನ್ನಡ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಶುದ್ದ ಕುಡಿಯುವ ನೀರಿನ ಘಟಕ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ದ.ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಟಿ.ಎಚ್.ಮೈಯ್ಯದ್ದಿ, ಚಂದ್ರಶೇಖರ್, ವಾಣಿ, ಅರುಣ್ ಕುಮಾರ್, ಸುನೀತಾ, ಮಸೀದಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಶಾಂತಾ, ಪೂರ್ಣಿಮಾ ಅಬ್ದುಲ್ ಖಾದರ್ ಹಸನಬ್ಬ, ಗುತಿಗೆದಾರ ಹನೀಫ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-24031801

 

Comments

comments

Comments are closed.

Read previous post:
Mulki-24031801
ಬಪ್ಪನಾಡು ಬ್ರಹ್ಮಕಲಶ ಧಾರ್ಮಿಕ ಸಭೆ

ಮೂಲ್ಕಿ :  ನಾನೆಂಬ ಅಹಂಕಾರ ಬೇಡ. ನೀನು ಮಾಡುತ್ತಿ ಎಂದು ದೇವರಲ್ಲಿ ನಂಬಿಕೆ ಇಟ್ಟರೆ ಆ ದೇವರು ಅಥವಾ ದೇವಿ ಮುನ್ನಡೆಸುತ್ತಾಳೆ. ದೇವರು ಕರುಣಪೂರ್ಣ. ಭಕ್ತಿಗೆ  ಮಾತ್ರ ಅನುಗ್ರಹ...

Close