ಬಪ್ಪನಾಡು ಬ್ರಹ್ಮಕಲಶ ಧಾರ್ಮಿಕ ಸಭೆ

ಮೂಲ್ಕಿ :  ನಾನೆಂಬ ಅಹಂಕಾರ ಬೇಡ. ನೀನು ಮಾಡುತ್ತಿ ಎಂದು ದೇವರಲ್ಲಿ ನಂಬಿಕೆ ಇಟ್ಟರೆ ಆ ದೇವರು ಅಥವಾ ದೇವಿ ಮುನ್ನಡೆಸುತ್ತಾಳೆ. ದೇವರು ಕರುಣಪೂರ್ಣ. ಭಕ್ತಿಗೆ  ಮಾತ್ರ ಅನುಗ್ರಹ ಮಾಡುತ್ತಾರೆ ದೇವರು. ಹೊರತು ಜಾತಿ ಮತ ನೋಡಿ ಅಲ್ಲ. ಬಪ್ಪನಾಡಿನಲ್ಲಿ ಮುಸ್ಲಿಮನಿಗೆ, ಉಡುಪಿಯಲ್ಲಿ ಕನಕನಿಗೆ, ಶಬರಿಗೆ ರಾಮ ಒಲಿದಿರುವುದನ್ನು ಉದಾಹರಿಸಬಹುದು. ಎಂದು ಪೇಜಾವರ ಶ್ರೀ  ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಪುಣ್ಯೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು.
ದುರ್ಗಾ ಅಂದರೆ ಕೋಟೆ. ರಕ್ಷಣೆಯ ಕೆಲಸ ಕೋಟೆಯದ್ದು. ಹಿಂದೂ ಸಮಾಜದವರಿಗೆ ದುರ್ಗೆ ಕೋಟೆಯಂತೆ ರಕ್ಷಿಸುತ್ತಾಳೆ. ಮಹಿಷಾಸುರ ಅಂದರೆ ನಾಡಕೋಣ ಕಾಡ ಕೋಣಗಳಂತೆ ಜಾಡ್ಯ ಹಾಗೂ ಆಕ್ರಮಣ ಗುಣವನ್ನು ದೂರೀಕರಿಸಿ ನಮ್ಮಲ್ಲಿ ಸದ್ಗುಣಗಳನ್ನು ಉಂಟು ಮಾಡಿ ಶಕ್ತಿ ಸ್ಪೂರ್ತಿಯನ್ನು ನೀಡುವ ಶಕ್ತಿಯ ಕೋಟೆ ದುರ್ಗೆ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಮೂಲ್ಕಿ ಅರಮನೆಯ ಅರಸರೂ, ಬಪ್ಪನಾಡು ದೇಗುಲದ ಆನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ಮಾತನಾಡಿ ಶಾಸಕ ಅಭಯಚಂದ್ರರ ಮುತುವರ್ಜಿಯಲ್ಲಿ ಕರ್ನಾಟಕ ಸರಕಾರದಿಂದ ಯಾತ್ರಿ ನಿವಾಸ ಹಾಗೂ ವಾಹನ ನಿಲುಗಡೆ ವ್ಯವಸ್ಥೆಗೆ ರೂ. ಒಂದೂವರೆ ಕೋಟಿಯಷ್ಟು ಅನುದಾನ ಬಂದಿದೆ ಎಂದು ಹೇಳಿದರು.
 ಮುಂಬೈ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಮಾತನಾಡಿ ಬಪ್ಪನಾಡು ದೇಗುಲ ಎರಡು ನದಿಗಳ ಮಧ್ಯೆ ಇರುವ ಅತ್ಯಂತ ಸುಂದರವಾದ ಕಾರ್ಣಿಕ ಕ್ಷೇತ್ರವಾಗಿದೆ. ಇಲ್ಲಿ ವಿದ್ಯೆ ಮುಂತಾದ ಉತ್ತಮ ಕೆಲಸಗಳಾಗಲಿ ಎಂದರು.
ಶಾಸಕ ಅಭಯಚಂದ್ರ,
ಶಿಬರೂರು ಗೋಪಾಲಕೃಷ್ಣ ತಂತ್ರಿ, ಕುಸುಮೋದರ ಶೆಟ್ಟಿ. ಯದುನಾರಾಯಣ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಎಂ. ನಾರಾಯಣ ಶೆಟ್ಟಿ, ಕರುಣಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಮ್ಮ ಪಿ, ಭಾರತ್ ಬೀಡಿ ಸಂಸ್ಥೆಯ ಅನಂತ ಪೈ, ಯುಪಿಸಿಎಲ್ ಅದಾನಿಯ ಸಹ ಅಧ್ಯಕ್ಷ ಕಿಶೋರ್ ಆಳ್ವ, ಎಂಆರ್ ಪಿಎಲ್ ನ ಲಕ್ಷ್ಮೀಕುಮಾರನ್, ನರಸಿಂಹನ್ ಎ. ಬಪ್ಪನಾಡು, ವೇದಪ್ರಕಾಶ್ ಶ್ರೀಯಾನ್,  ಆನುವಂಶಿಕ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಹರಿಶ್ಚಂದ್ರ ಕೋಟ್ಯಾನ್, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ ಮತ್ತಿತರರಿದ್ದರು.
ಸಮಿತಿಯ  ಕಾರ್ಯದರ್ಶಿ ಸುನಿಲ್ ಆಳ್ವಾ ಸ್ವಾಗತಿಸಿದರು. ಸಂತೋಷ ಕುಮಾರ ಹೆಗ್ಡೆ ಪ್ರಸ್ತಾವನೆಗೈದರು.  ನವೀನ್ ಶೆಟ್ಟಿ ಎಡ್ಮೆಮಾರ್ ಹಾಗೂ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Mulki-24031801

Comments

comments

Comments are closed.

Read previous post:
Mulki-23031806
ಬಪ್ಪನಾಡು ಬ್ರಹ್ಮಕಲಶ ಹಗಲು ರಥೋತ್ಸವ

ಬಪ್ಪನಾಡು ಬ್ರಹ್ಮಕಲಶ ಹಗಲು ರಥೋತ್ಸವ  

Close