ದೇವರಗುಡ್ಡೆ : ರಸ್ತೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿಶೇಷ ಅನುದಾನ ಒದಗಿಸಿ ಅಭಿವೃದ್ದಿ ಪಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಕಟೀಲು ದೇವರಗುಡ್ಡೆಯಲ್ಲಿ ಅಲ್ಪಸಂಖ್ಯಾತರ ನಿಧಿಯಿಂದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಂಕ್ರೀಟಿಕರಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ನನ್ನ ಅನುದಾನದಲ್ಲಿ ರಸ್ತೆ, ಹೈಮಾಸ್ಟ್ ದೀಪ ಮತ್ತಿತರ ಅನೇಕ ಕೆಲಸ ಕಾರ್ಯಗಳು ನಡೆದಿದ್ದು ಕಳೆದ ಒಂದು ವರ್ಷದಲ್ಲಿ ಮೂಲ್ಕಿ ಮೂಡಬಿದ್ರೆ ಅನೇಕ ರಿಕ್ಷಾ ತಂಗುದಾಣ, ರಸ್ತೆ ಮತ್ತಿತರ ಕಾರ್ಯಗಳಿಗೆ ಸುಮಾರು 16 ಕೋಟಿ ಅನುದಾನ ಒದಗಿಸಲಾಗಿದೆ. ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಅಲ್ಪ ಅವಧಿಯಲ್ಲಿಯೇ ಸುಮಾರು 6 ಕೋಟಿಯಷ್ಟೂ ಹಣ ಒದಗಿಸಲಾಗಿದೆ ಎಂದರು. ಈ ಸಂದರ್ಭ ಮೋನಪ್ಪ ಶೆಟ್ಟಿ ಎಕ್ಕಾರು, ಗುರುರಾಜ್ ಪೂಜಾರಿ, ಪುನೀತ್ ಶೆಟ್ಟಿ, ಮುದಸ್ಸಿರ್ ಕುದ್ರೋಳಿ, ಡೇನಿಯಲ್ ಡಿಸೋಜ, ರೋಸಿ ಪಿಂಟೋ, ವಿಜಯ, ಸುಧಾ, ಚಂದ್ರಹಾಸ್, ಪ್ರೆಸಿಲ್ಲ, ದೇವದಾಸ್ ಎಕ್ಕಾರು, ಜೋಸೆಪ್ ಪುಟ್ರಾಡೋ, ಲಕ್ಷೀ, ದೇವಿ ಪ್ರಸಾದ್, ಲೋಕೇಶ್ ಪೂಜಾರಿ, ಬೇಬಿ, ವೀಣಾ ದುರ್ಗಾಪ್ರಸಾದ್, ಸುಲೋಚನಾ ಭಟ್, ಶರ್ಮಿಳಾ ಶಂಕರ್, ಕಿರಣ್‌ರಾಜ್, ಮೋಹನ್‌ದೇವರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-26031803

Comments

comments

Comments are closed.

Read previous post:
Kinnigoli-25031802
ಕೆಮ್ಮಡೆ ಶ್ರೀ ವೈದ್ಯನಾಥ ದೈವಸ್ಥಾನ ಧಾರ್ಮಿಕ ಸಭೆ

ಕಿನ್ನಿಗೋಳಿ : ಧರ್ಮ ಜ್ರಾಗೃತಿಯ ಕೆಲಸ ನಡೆಯುವ ಕ್ಷೇತ್ರ ಉನ್ನತ ಸ್ಥಾನದಲ್ಲಿರುತ್ತದೆ. ಶುದ್ದ ಮನಸ್ಸಿನ ಭಕ್ತಿಯನ್ನು ದೇವರು ಮೆಚ್ಚಿ ಜನರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ. ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರೌಢಶಾಲೆಯ...

Close