ಕಿನ್ನಿಗೋಳಿ :ಅಕ್ಯುಪ್ರೆಶರ್, ಸುಜೋಕ್ ಶಿಬಿರ

ಕಿನ್ನಿಗೋಳಿ ; ಒತ್ತಡದ ಜೀವನವಿದ್ದರೂ ಜನರು ಆರೋಗ್ಯದ ಬಗ್ಗೆ ಗಮನ ನೀಡಿ ಆರೋಗ್ಯ ಸಮಸ್ಯೆ ನಿವಾರಿಸುವ ಸಂಘ ಸಂಸ್ಥೆಗಳ ಶಿಬಿರಕ್ಕೆ ಭೇಟಿ ನೀಡಿ ಆರೋಗ್ಯ ಸಲಹೆ ಸೂಕ್ತ ಚಿಕಿತ್ಸೆ ಪಡಕೊಳ್ಳಬೇಕು ಎಂದು ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಹಾಗೂ ಭ್ರಾಮರೀ ಮಹಿಳಾ ಸಮಾಜ (ರಿ.), ಮೆನ್ನಬೆಟ್ಟು ಕಿನ್ನಿಗೋಳಿ ಸಹಯೋಗದಲ್ಲಿ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಅಂಗೈಯಲ್ಲಿ ಆರೋಗ್ಯ ಮಾನವನ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ವಿಶೇಷವಾಗಿ ಡಯಾಬಿಟೀಸ್, ಬೆನ್ನುನೋವು, ಗಂಟುನೋವು, ಅಧಿಕ ರಕ್ತದೊತ್ತಡ, ಡಿಸ್ಕ್ ಸಮಸ್ಯೆ, ಗ್ಯಾಸ್ ಟ್ರಬಲ್ ಮುಂತಾದವುಗಳನ್ನು ಮದ್ದಿಲ್ಲದೇ ಗುಣಪಡಿಸಬಹುದಾದ ಉಚಿತ ಅಕ್ಯುಪ್ರೆಶರ್ ಮತ್ತು ಸುಜೋಕ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆವಹಿಸಿದ್ದರು.
ಡಾ. ಪಿ. ಸುಬ್ರಹ್ಮಣ್ಯ ಭಟ್ ಮಿತ್ತೂರು ಚಿಕಿತ್ಸೆ ಮಾಹಿತಿ ನೀಡಿದರು.
ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಅನುಷಾ ಕೊಡೆತ್ತೂರು ವಂದಿಸಿದರು. ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Kinnigoli-26031805

Comments

comments

Comments are closed.

Read previous post:
Kinnigoli-26031804
ಅಂಗರಗುಡ್ಡೆ: ರಾಮನವಮಿ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಭಜನೆಯ ಮೂಲಕವಾಗಿ ಸುಲಭವಾಗಿ ಭಗವಂತನನ್ನು ಮೆಚ್ಚಿಸಬಹುದು ಎಂದು ಪುರಂದರ ದಾಸ ಕನಕ ದಾಸರಂತಹ ದಾರ್ಶನಿಕರು ನಮಗೆ ದಿವ್ಯ ಸಂದೇಶ ನೀಡಿದ್ದಾರೆ ಎಂದು ಪಡಪಣಂಬೂರು ಗ್ರಾಮ ಪಂಚಾಯಿತಿ ಮಾಜಿ...

Close