ದಾಮಸ್‌ಕಟ್ಟೆ : ಬ್ಯಾಂಕ್ 105 ಶಾಖೆ ಉದ್ಘಾಟನೆ

ಕಿನ್ನಿಗೋಳಿ; ದಾಮಸ್ ಕಟ್ಟೆಯಲ್ಲಿ ನೂತನವಾಗಿ ಪ್ರಾರಂಭವಾದ ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ (ಲಿ) ಬ್ಯಾಂಕ್ ನ 105 ಶಾಖೆಯ ಇತಿಹಾಸದಲ್ಲೇ 33.5 ಕೋಟಿ ಹಣ ಸಂಗ್ರಹವಾಗಿ ಅತ್ಯಂತ ಹೆಚ್ಚು ಠೇವಣಿ ಇರಿಸಿದ ಬ್ಯಾಂಕ್ ಶಾಖೆ ಆಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಹೇಳಿದರು
ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸ್‌ಕಟ್ಟೆ ಅನ್ನಪೂರ್ಣೇಶ್ವರೀ ಕಟ್ಟಡದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 105 ನೇ ಶಾಖೆಯ ಉದ್ಘಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಬ್ಯಾಂಕ್ ಕೃಷಿಕರ ಬ್ಯಾಂಕ್ ಆಗಿದ್ದು ಕೃಷಿಕರ ಬೇಡಿಕೆಗೆ ತಕ್ಕಂತೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ರೈತರು ಕೃಷಿ ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ನಮ್ಮ ಅವಿಭಜಿತ ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಸಾಲ ಸರಿಯಾದ ಕ್ರಮದಲ್ಲಿ ಮರುಪಾವತಿಯಾಗುತ್ತಿದೆ. ಸಬಾರ್ಡ್ ನಿಂದ ನೇರ ಸಾಲವನ್ನು ಪಡೆದಿದ್ದು ಮಾತ್ರವಲ್ಲದೆ, ಹಲವು ವರ್ಷಗಳ ಹಿಂದೆಯೇ 50 ಸಾವಿರ ರುಪೆ ಕಾರ್ಡ್‌ಗಳನ್ನು ವಿತರಿಸಲಾಗಿದ್ದು ಕ್ಯಾಶ್ ಲೆಸ್ ವಹಿವಾಟು ನಡೆಯುತ್ತಿದೆ ಎಂದರು. ಶಾಸಕ ಮುಲ್ಕಿ ಮೂಡಬಿದ್ರಿ ಶಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಮಳವಳ್ಳಿ ಶಿವರಾಯ ಮತ್ತು ಕಾರ್ನಾಡು ಸದಾಶಿವ ರಾಯರು ಸಹಕಾರಿ ಕ್ಷೇತ್ರದ ಕನಸು ಕಂಡಿದ್ದು ಇಂದು ಸಾಕಾರಗೊಂಡಿದೆ. ರಾಜೇಂದ್ರ ಕುಮಾರ್ ಅಧ್ಯಕ್ಷರಾದ ಬಳಿಕ ಬ್ಯಾಂಕಿಗೆ ಇನ್ನಷ್ಟು ಬಲ ಬಂದಿದೆ. ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಾಣುವಂತಾಗಿದೆ ಎಂದರು.
ದಾಮಸ್‌ಕಟ್ಟೆ ಕಿರೆಂ ರೆಮದಿ ಅಮ್ಮನವರ ಇಗರ್ಜಿ ಧರ್ಮಗುರು ರೆ. ಫಾ. ವಿಕ್ಟರ್ ಡಿಮೆಲ್ಲೋ ಬ್ಯಾಂಕ್ ನ ಭದ್ರತಾ ಕೋಶ ಉದ್ಘಾಟಿಸಿದರು.
ನೂತನ ನವೋದಯ ಸ್ವಸಹಾಯ ಸಂಘಗಳ ಉದ್ಘಾಟನೆ ನಡೆಯಿತು.
ಈ ಸಂದರ್ಭ ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಚಯ ಖಾತೆದಾರರಿಗೆ ಪಾಸ್ ಬುಕ್, ಸ್ವ ಸಹಾಯ ಸಂಘಗಳ ನಿರ್ಣಯ ಪುಸ್ತಕ, ಠೇವಣಿದಾರರಿಗೆ ಠೇವಣಿ ಪತ್ರ, ಸಾಲ ಪತ್ರ, ವಾಹನ ಸಾಲ ಪತ್ರಗಳನ್ನು ವಿತರಿಸಲಾಯಿತು. ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದವರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಅದೃಷ್ಟ ಚೀಟಿ ವಿತರಿಸಿ, ಚೀಟಿ ಎತ್ತುವ ಮೂಲಕ ಮೊದಲ ಬಹುಮಾನ 4 ಗ್ರಾಂ ಮತ್ತು ದ್ವಿತೀಯ ಬಹುಮಾನ 2 ಗ್ರಾಂ ಚಿನ್ನದ ನಾಣ್ಯ ವಿತರಿಸಲಾಯಿತು.
ನೂತನ ಶಾಖೆಯ ಶಾಖಾ ವ್ಯವಸ್ಥಾಪಕ ರಾಘವೇಂದ್ರ ಶೆಟ್ಟಿ ಅವರನ್ನು ಅಧ್ಯಕ್ಷ ರಾಜೇಂದ್ರ ಕುಮಾರ್ ಸನ್ಮಾನಿಸಿದರು.
ವಾದಿರಾಜ್ ಶೆಟ್ಟಿ ಮತ್ತು ಸಂಚಯ ಖಾತೆಯ ಪ್ರೇರಕರನ್ನು ಗೌರವಿಸಲಾಯಿತು.
ಈ ಸಂದರ್ಭ ಐಕಳ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಾಕರ ಚೌಟ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲವ ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಶಾಖಾ ಪ್ರಬಂಧಕ ರತ್ನಾಕರ ಶೆಟ್ಟಿ ಎಕ್ಕಾರು, ಕಾವೂರು ವ್ಯವಸಾಯ ಸಂಘದ ಅಧ್ಯಕ್ಷ ಹರಿಶ್ಚಂದ್ರ, ವರದರಾಯ ಕಾಮತ್, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜರಾಮ ಭಟ್, ಬಾಸ್ಕರ ಎಸ್ ಕೋಟ್ಯಾನ್, ಬಿ ರಘುರಾಮ ಶೆಟ್ಟಿ, ಕೆ.ಎಸ್ ದೇವರಾಜ್, ಸದಾಶಿವ ಉಳ್ಳಾಲ್, ಎಸ್ ರಾಜು ಪೂಜಾರಿ, ಶಶಿಕುಮಾರ್ ರೈ, ಬಿ ರಾಜೇಶ್ ರಾವ್, ಎಸ್.ಬಿ ಜಯರಾಮ ರೈ, ಎನ್ ರಮೇಶ್ ಶೆಟ್ಟಿ, ಬಿ,ಕೆ ಸಲೀಂ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಸ್ತಾವನೆಗೈದರು, ನಿರ್ದೇಶಕ ಎಂ ವಾದಿರಾಜ ಶೆಟ್ಟಿ ಸ್ವಾಗತಿಸಿದರು. ಶಶಿಕುಮಾರ್ ರೈ ವಂದಿಸಿದರು. ಪ್ರಾದ್ಯಾಪಕ ಸಾಯಿನಾಥ ಶೆಟ್ಟಿ ಮತ್ತು ನಿರಂಜನ್ ಕಾರ್ಯಕ್ರಮ ನಿರೂಪಿಸಿದರು.

ನೂರಕ್ಕೆ ನೂರು ಕೃಷಿ ಸಾಲವನ್ನು ಮರುಪಾವತಿ ಮಾಡಿದ ಬ್ಯಾಂಕ್ ನಮ್ಮದಾಗಿದೆ, 3500 ಕೋಟಿಗೂ ಮಿಕ್ಕಿ ಸಾಲ ನೀಡಿ ರಾಜ್ಯದಲ್ಲಿಯೇ ನಮ್ಮ ಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ. ನವೋದಯ ಸ್ವಸಹಾಯ ಸಂಘಗಳ ಧ್ಯೇಯೋದ್ದೇಶ ಆಶಯಗಳು ಈಡೇರುತ್ತಿದ್ದು ಸಂಘಗಳ ಕುಟುಂಬಗಳು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿವೆ.

Kinnigoli-26031808 Kinnigoli-26031809

Comments

comments

Comments are closed.

Read previous post:
Kinnigoli-26031807
ಉಳೆಪಾಡಿ : ಆಮಂತ್ರಣ ಪತ್ರ ಬಿಡುಗಡೆ

ಕಿನ್ನಿಗೋಳಿ: ದೈವ ದೇವಸ್ಥಾನಗಳು ನಮ್ಮ ಸಂಸ್ಕಾರ ಸಂಸ್ಕ್ರತಿಯ ಪ್ರತೀಕ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರದಿಂದ ಗ್ರಾಮದ ಅಭಿವೃದ್ದಿ ಕಾಣಬಹುದು ಎಂದು ಮೂಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ರಾಮದಾಸ ಆಚಾರ್ಯ...

Close