ಕಿನ್ನಿಗೋಳಿ ಅಂಚೆ ಮಾಹಿತಿ ಕಾರ್ಯಗಾರ

ಕಿನ್ನಿಗೋಳಿ: ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ಅತೀ ಹೆಚ್ಚು ಶಾಖೆ ಹೊಂದಿದ್ದು ಕಳೆದ  150 ಕ್ಕೂ ಹೆಚ್ಚು ವರ್ಷದಿಂದ ಉತ್ತಮ ಸೇವೆ ನೀಡುತ್ತ ಜನರ ನಿಕಟವರ್ತಿಗಳಾಗಿದ್ದು ಇದೀಗ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ ಎಂದು ಮಂಗಳೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಮ್ಯಾಕ್ಸಿ ಪಿಂಟೋ ಹೇಳಿದರು.
ಕಿನ್ನಿಗೋಳಿ ಅಂಚೆ ಕಛೇರಿಯಲ್ಲಿ ಕಿನ್ನಿಗೋಳಿ ಅಂಚೆ ವಲಯದ ಆಶ್ರಯದಲ್ಲಿ ಅಂಚೆ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೊಸ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸುವ ಜೊತೆಗೆ ಗ್ರಾಮೀಣ ಜನರಿಗೆ ವರದಾನ ವಾಗುವ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಹೆಣ್ಣು ಮಕ್ಕಳಿಗೆ ಉಪಯೋಗವಾಗುವ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆಗಳು ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕಿನ್ನಿಗೋಳಿ ಅಂಚೆ ಕಚೇರಿಯ ಅಂಚೆ ಪಾಲಕಿ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು. ಐಕಳ ಅಂಚೆ ಕಛೇರಿಯ ಅಂಚೆ ಪಾಲಕ ತಿಲಕ್, ಅಂಚೆ ಮೆಲ್‌ಒವರ್‌ಸಿಸ್ ವಲೇರಿಯನ್ ಡಿಸೋಜ ಉಪಸ್ಥಿತರಿದ್ದರು.

Kinnigoli-26031806

Comments

comments

Comments are closed.

Read previous post:
Kinnigoli-26031805
ಕಿನ್ನಿಗೋಳಿ :ಅಕ್ಯುಪ್ರೆಶರ್, ಸುಜೋಕ್ ಶಿಬಿರ

ಕಿನ್ನಿಗೋಳಿ ; ಒತ್ತಡದ ಜೀವನವಿದ್ದರೂ ಜನರು ಆರೋಗ್ಯದ ಬಗ್ಗೆ ಗಮನ ನೀಡಿ ಆರೋಗ್ಯ ಸಮಸ್ಯೆ ನಿವಾರಿಸುವ ಸಂಘ ಸಂಸ್ಥೆಗಳ ಶಿಬಿರಕ್ಕೆ ಭೇಟಿ ನೀಡಿ ಆರೋಗ್ಯ ಸಲಹೆ ಸೂಕ್ತ ಚಿಕಿತ್ಸೆ ಪಡಕೊಳ್ಳಬೇಕು...

Close