ಪಕ್ಷಿಕೆರೆ : ನೇಣು ಬಿಗಿದು ಆತ್ಮಹತ್ಯೆ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಹೊಸಕಾಡು ವಿನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವಕನನ್ನು ಮೂಲ್ಕಿ ಸಮೀಪದ ಕೆರೆಕಾಡು ನಿವಾಸಿ ಗುರುಪ್ರಸಾದ್ ಪದ್ಮಶಾಲಿ ಎಂದು ಗುರುತಿಸಲಾಗಿದೆ.
ಗುರುಪ್ರಸಾದ್ ಸೋಮವಾರ ಮಧ್ಯಾಹ್ನ ಹೊಸಕಾಡಿನಲ್ಲಿರುವ ತನ್ನ ವೆಲ್ಡಿಂಗ್ ಶಾಪ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹಲವು ಸಮಯದಿಂದ ಪಕ್ಷಿಕೆರೆಯ ಹೊಸಕಾಡಿನಲ್ಲಿ ವೆಲ್ಡಿಂಗ್ ಶಾಪ್ ಹೊಂದಿದ ಗುರುಪ್ರಸಾದ್ ಗೆ ಕಳೆದ ಒಂದು ವಾರದ ಹಿಂದೆ ಮದುವೆ ನಿಶ್ಚಿತಾರ್ಥ ನಡೆದಿತ್ತು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯನಾಗಿದ್ದ ಇವರು ಸರಳ ಸಜ್ಜನಿಕ ವ್ಯಕ್ತಿಯಾಗಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ. ಮೂಲ್ಕಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Kinnigoli-260318010

Comments

comments

Comments are closed.

Read previous post:
Kinnigoli-26031808
ದಾಮಸ್‌ಕಟ್ಟೆ : ಬ್ಯಾಂಕ್ 105 ಶಾಖೆ ಉದ್ಘಾಟನೆ

ಕಿನ್ನಿಗೋಳಿ; ದಾಮಸ್ ಕಟ್ಟೆಯಲ್ಲಿ ನೂತನವಾಗಿ ಪ್ರಾರಂಭವಾದ ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ (ಲಿ) ಬ್ಯಾಂಕ್ ನ 105 ಶಾಖೆಯ ಇತಿಹಾಸದಲ್ಲೇ 33.5 ಕೋಟಿ ಹಣ ಸಂಗ್ರಹವಾಗಿ ಅತ್ಯಂತ ಹೆಚ್ಚು ಠೇವಣಿ ಇರಿಸಿದ ಬ್ಯಾಂಕ್...

Close