ಉಳೆಪಾಡಿ : ಆಮಂತ್ರಣ ಪತ್ರ ಬಿಡುಗಡೆ

ಕಿನ್ನಿಗೋಳಿ: ದೈವ ದೇವಸ್ಥಾನಗಳು ನಮ್ಮ ಸಂಸ್ಕಾರ ಸಂಸ್ಕ್ರತಿಯ ಪ್ರತೀಕ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರದಿಂದ ಗ್ರಾಮದ ಅಭಿವೃದ್ದಿ ಕಾಣಬಹುದು ಎಂದು ಮೂಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ರಾಮದಾಸ ಆಚಾರ್ಯ ಹೇಳಿದರು.
ಭಾನುವಾರ ಉಳೆಪಾಡಿ ಶ್ರೀ ಉಮಾಮಹೇಶ್ವರೀ ಮಹಾಗಣಪತಿ ದೇವಳದಲ್ಲಿ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶೋತ್ಸದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಪುಲ್ಲೋಡಿ ಬೀಡು ಮಾತನಾಡಿ ಗ್ರಾಮಸ್ಥರ ಊರ ಪರವೂರ ದಾನಿಗಳ ಸಹಕಾರದಿಂದ ದೇವಳದ ಅಭಿವೃದ್ಧಿ ಕೆಲಸಗಳು ಶೀಘ್ರವಾಗಿ ನಡೆಯುತ್ತಿದೆ ಎಂದರು.
ಮುಂಡ್ಕೂರು ಮಧ್ವಪತಿ ಆಚಾರ್ಯ, ಯುಗಪುರುಷ ಸಂಪಾದಕ ಕೆ.ಭುವನಾಭಿರಾಮ ಉಡುಪ, ಅರ್ಚಕ ಪದ್ಮನಾಭ ಭಟ್, ಚಿತ್ತರಂಜನ್ ಶೆಟ್ಟಿ , ನಾರಾಯಣ ಶೆಟ್ಟಿ ಉಳೆಪಾಡಿ, ಕೃಷ್ಣ ಶೆಟ್ಟಿ ಪಡ್ಡಣಗುತ್ತು, ಭಾಸ್ಕರ ಶೆಟ್ಟಿ ಮುಂಡ್ಕೂರು, ಸಾಯಿನಾಥ ಶೆಟ್ಟಿ ಮುಂಡ್ಕೂರು, ಕರುಣಾಕರ ಶೆಟ್ಟಿ ಉಳೆಪಾಡಿ, ಸಮಿತಿಯ ಕಾರ್ಯಧ್ಯಕ್ಷ ನಾರಾಯಣ ಶೆಟ್ಡಿ , ದಿವಾಕರ ಚೌಟ, ಸುಧಾಕರ ಸಾಲಿಯಾನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಎನ್ ಶೆಟ್ಟಿ ಬಡಗುಮನೆ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಕಲ್ಲಮರಿಗೆ ಬೀಡು, ವಸಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರವೀಂದ್ರ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-26031807

Comments

comments

Comments are closed.