ಅಂಗರಗುಡ್ಡೆ ರಾಮನವಮಿ ಧಾರ್ಮಿಕ ಸಭೆ

ಕಿನ್ನಿಗೋಳಿ : ಆಧ್ಮಾತಿಕ ಕೇಂದ್ರಗಳಾದ ಮಠ ಮಂದಿರಗಳು ಸಮಾಜಕ್ಕೆ ಧಾರ್ಮಿಕ ಸಂಸ್ಕಾರ ಸಂಸ್ಕ್ರತಿಯ ಅರಿವು ಮೂಡಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ರಾಮನವಮಿ ಪ್ರಯುಕ್ತ ಸೋಮವಾರ ಅಂಗರಗುಡ್ಡೆ ಶ್ರೀ ರಾಮಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಜನಾ ಮಂಡಳಿಯ ಗೌರವಾಧ್ಯಕ್ಷ ಜಯ ಶೆಟ್ಟಿ ಮುಂಬಯಿ ಮಾತನಾಡಿ 30 ವರ್ಷಗಳ ಹಿಂದೆ ಸಣ್ಣ ಸಂಘಟನೆಯ ಮೂಲಕವಾಗಿ ಆರಂಭವಾದ ಭಜನಾ ಕಾರ್ಯ ಇಂದು ದೊಡ್ಡ ಮಟ್ಟದಲ್ಲಿ ಭವ್ಯವಾಗಿ ಎದ್ದು ನಿಂತು ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿಲ್ಲಾ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಯಂ, ತುಳುಸಾಹಿತ್ಯ ಆಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಸಮಿತಿಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಮುಲ್ಕಿ ಮೂಡಬಿದ್ರೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಈಶ್ವರ್ ಕಟೀಲು, ಯುಗಪುರುಷದ ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ತಾ. ಪಂ. ಸದಸ್ಯರಾದ ದಿವಾಕರ ಕರ್ಕೇರಾ, ಶರತ್ ಕುಬೆವೂರು, ಭಜನಾ ಮಂಡಳಿಯ ಅಧ್ಯಕ್ಷ ಜೀವನ್ ಶೆಟ್ಟಿ , ಮಹಿಳಾ ಮಂಡಳಿಯ ಅಧ್ಯಕ್ಷೆ ಸುನೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸತೀಶ್ ಪೂಜಾರಿ ಸ್ವಾಗತಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Kinnigoli-27031801

Comments

comments

Comments are closed.

Read previous post:
Kinnigoli-260318010
ಪಕ್ಷಿಕೆರೆ : ನೇಣು ಬಿಗಿದು ಆತ್ಮಹತ್ಯೆ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಹೊಸಕಾಡು ವಿನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವಕನನ್ನು ಮೂಲ್ಕಿ ಸಮೀಪದ ಕೆರೆಕಾಡು ನಿವಾಸಿ ಗುರುಪ್ರಸಾದ್ ಪದ್ಮಶಾಲಿ ಎಂದು ಗುರುತಿಸಲಾಗಿದೆ....

Close