ಭಾರತದ ಬೆಳಕಿನ ನಡೆಗೆ ಯಾಗ

ಕಿನ್ನಿಗೋಳಿ : ವಿಶ್ವ ಜಿಗೀಷದ್ ಯಾಗವು ವಿಶ್ವದೆಲ್ಲಡೆ ಭಾರತದ ಬೆಳಕಿನ ನಡೆಗೆ ಎಂಬ ಮೂಲ ಮಂತ್ರದೊಂದಿಗೆ ಜನರಲ್ಲಿನ ಧಾರ್ಮಿಕ ನಂಬಿಕೆಗಳ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಗಲಿದೆ ಎಂದು ಸಂಸದ ಹಾಗೂ ಯಾಗದ ಪ್ರಮುಖ ನಳಿನ್‌ಕುಮಾರ್ ಕಟೀಲು ಹೇಳಿದರು.
ಹಳೆಯಂಗಡಿ ಸಮೀಪದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ಏ.10ರಿಂದ 17ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್ ಯಾಗದ ಉಪ ಸಮಿತಿಯ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು.
ಪ್ರತಿಯೊಂದು ಕಾರ್ಯದಲ್ಲಿ ಸ್ಥಳೀಯ ಗ್ರಾಮವನ್ನು ಸೇರಿಸಿಕೊಂಡು ಕಾರ್ಯ ನಿರ್ವಹಿಸಬೇಕು, ಭಜನಾ ಸಂಕೀರ್ತನೆಯ ತಂಡಗಳನ್ನು ಸಜ್ಜುಗೊಳಿಸಬೇಕು, ಮಾತೃ ಶಕ್ತಿಯನ್ನು ಸದ್ಭಳಕೆ ಮಾಡಿಕೊಂಡು ಯಾಗದ ಸಂಪೂರ್ಣ ಫಲವನ್ನು ಜನ ಸಾಮಾನ್ಯರಿಗೆ ಸಿಗುವಂತಹ ವಾತಾವರಣ ಸೃಷ್ಟಿ ಮಾಡುವ ಕರ್ತವ್ಯ ನಮ್ಮದಾಗಿದೆ ಎಂದು ಹೇಳಿದರು.
ಯಾಗದ ವಕ್ತಾರ ಡಾ. ಸೋಂದಾ ಭಾಸ್ಕರ ಭಟ್ ಮಾತನಾಡಿ ವಿಶ್ವಜಿಗೀಷದ್ ಯಾಗದ ಬಗ್ಗೆ ಸಾಮಾನ್ಯ ಜನರಲ್ಲಿ ಪುರಾತನ ಸಂಸ್ಕೃತಿಯನ್ನು ಸಾಮಾನ್ಯ ರೀತಿಯಲ್ಲಿ ತಿಳಿಹೇಳುವ ಪ್ರಯತ್ನ ನಡೆದಿದೆ ಎಂದರು.
ವಿವಿಧ ಉಪ ಸಮಿತಿಯ ಶೋಭೇಂದ್ರ ಸಸಿಹಿತ್ಲು, ಪಿತಾಂಬರ ಶೆಟ್ಟಿಗಾರ್, ರಜನಿ ದುಗ್ಗಣ್ಣ, ದಿವಾಕರ ಸಾಮಾನಿ, ಉಮೇಶ್ ಪೂಜಾರಿ, ಜಗದೀಶ್ ಕರ್ಕೇರ, ಮನಪಾದ ಮಾಜಿ ಮೇಯರ್ ದಿವಾಕರ್, ದೇವಸ್ಥಾನದ ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್, ಈಶ್ವರ ಕಟೀಲು, ಶಂಕರ ಬಿ. ಬಂಗೇರ ಸಸಿಹಿತ್ಲು, ಯೋಗೀಶ್ ಪೂಜಾರಿ, ಉದಯ ಬಿ. ಸುವರ್ಣ ಸಸಿಹಿತ್ಲು, ಜ್ಯೋತಿ ರಾಮಚಂದ್ರ, ಸೇವಂತಿ ದೇವಾಡಿಗ, ಸಾವಿತ್ರಿ ದಿವಾಕರ್ ಭಟ್, ಹೇಮಂತ್‌ಕುಮಾರ್, ಮೋಹನ್‌ದಾಸ್, ಆದರ್ಶ ಶೆಟ್ಟಿ ಎಕ್ಕಾರು, ಹಿಮಕರ ಕದಿಕೆ,
ಎಚ್.ರಾಮಚಂದ್ರ ಶೆಣೈ, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-27031803

Comments

comments

Comments are closed.

Read previous post:
Kinnigoli-27031802
ಉಲ್ಲಂಜೆ ತೆರೆದ ಬಾವಿ ಉದ್ಘಾಟನೆ

ಕಿನ್ನಿಗೋಳಿ : ಪ್ರಧಾನ ಮೋದಿ ಅವರ ನೇತೃತ್ವದ ಸರಕಾರದ ಮಹತ್ವದ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ...

Close