ಉಲ್ಲಂಜೆ ತೆರೆದ ಬಾವಿ ಉದ್ಘಾಟನೆ

ಕಿನ್ನಿಗೋಳಿ : ಪ್ರಧಾನ ಮೋದಿ ಅವರ ನೇತೃತ್ವದ ಸರಕಾರದ ಮಹತ್ವದ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಸೋಮವಾರ ಉಲ್ಲಂಜೆಯಲ್ಲಿ ನರೆಗಾ ಯೋಜನೆಯಡಿಯಲ್ಲಿ ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ತೆರೆದ ಬಾವಿ ರಚಿಸಿ ಗ್ರಾಮ ಪಂಚಾಯಿತಿಯಿಂದ ಪಂಪ್ ಹಾಗೂ ಪೈಪ್‌ಲೈನ್ ಅಳವಡಿಸಿದ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಕೆ. ಭುವನಾಭಿರಾಮ ಉಡುಪ, ದಾಮೋದರ ಶೆಟ್ಟಿ, ಲಕ್ಷ್ಮೀ, ಮಲ್ಲಿಕಾ , ಸುಶೀಲಾ, ಭಾಸ್ಕರ ಪೂಜಾರಿ, ಸುಗುಣ, ಕೇಶವ ಕರ್ಕೇರಾ, ನಿತ್ಯಾನಂದ ರಾವ್, ಗುರುರಾಜ ಮಲ್ಲಿಗೆಯಂಗಡಿ, ರಘುವೀರ ಕಾಮತ್, ಕಿಶೋರ್ ಭಂಡಾರಿ ಮತ್ತಿತತರರು ಉಪಸ್ಥಿತರಿದ್ದರು.

Kinnigoli-27031802

Comments

comments

Comments are closed.

Read previous post:
Kinnigoli-27031801
ಅಂಗರಗುಡ್ಡೆ ರಾಮನವಮಿ ಧಾರ್ಮಿಕ ಸಭೆ

ಕಿನ್ನಿಗೋಳಿ : ಆಧ್ಮಾತಿಕ ಕೇಂದ್ರಗಳಾದ ಮಠ ಮಂದಿರಗಳು ಸಮಾಜಕ್ಕೆ ಧಾರ್ಮಿಕ ಸಂಸ್ಕಾರ ಸಂಸ್ಕ್ರತಿಯ ಅರಿವು ಮೂಡಿಸುವುದರೊಂದಿಗೆ ಊರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್...

Close