ಕಟೀಲು ಕಿನ್ನಿ ಲಚ್ಚಿಲ್ :ಕುಡಿಯುವ ನೀರಿನ ಬಾವಿ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿ ಲಚ್ಚಿಲ್ ನಲ್ಲಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಕೇಂದ್ರ ಸರಕಾರದ ಉದ್ಯೋಗ ಖಾತರಿಯಲ್ಲಿ ಮತ್ತು ಕಟೀಲು ಪಂಚಾಯತಿ ಅನುದಾನದಲ್ಲಿ ನಿರ್ಮಾಣವಾದ ನೂತನ ಕುಡಿಯುವ ನೀರಿನ ಬಾವಿಯನ್ನು ದ.ಕ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಯುವಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ ಕಟೀಲು, ದಯಾನಂದ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಚಂದ್ರಶೇಖರ ಶೆಟ್ಟಿ, ಗುರುರಾಜ ಮಲ್ಲಿಗೆಯಂಗಡಿ, ಕೇಶವ ಕರ್ಕೇರ, ತಾರನಾಥ ಶೆಟ್ಟಿ, ರವಿರಾಜ ಶೆಟ್ಟಿ ಬಾಳಿಕೆ ಮನೆ ಭಂಡಾರ ಮನೆ, ಯಶೋಧರ್, ಜಯ ಶೆಟ್ಟಿ, ಬೇಬಿ, ಜಯಂತಿ, ವಿನೋದ್ ಮತ್ತಿತರರು ಉಪಸ್ಥಿತರಿದ್ದರು.Kinnigoli-28031805

Comments

comments

Comments are closed.

Read previous post:
Kinnigoli-28031804
ಗುತ್ತಕಾಡು ಎಸ್.ಟಿ ಕಾಲನಿ ರಸ್ತೆ ಗುದ್ದಲಿಪೂಜೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಮ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡು ಎಸ್.ಟಿ ಕಾಲನಿಗೆ ಗ್ರಾಮ ವಿಕಾಸ ಯೋಜನೆಯ 5 ಅನುದಾನದಿಂದ ನಿರ್ಮಾಣಗೊಳ್ಳಲಿರುವ ರಸ್ತೆ ಕಾಂಕ್ರೀಟೀಕರಣ ಗುದ್ದಲಿಪೂಜೆಯನ್ನು ಶನಿವಾರ ಶಾಸಕ...

Close