ಸಮಾಜದ ಬಡವರ್ಗಕ್ಕೆ ಆಸರೆಯಾಗಿ

ಕಿನ್ನಿಗೋಳಿ : ಸಮಾಜದ ಬಡವರ್ಗಕ್ಕೆ ಆಸರೆಯಾಗಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು, ಜಾತಿ ಮತ ಭೇದವನ್ನು ದೂರಮಾಡಿ ಸಂಘಟನಾತ್ಮಕವಾಗಿ ಸೇವೆಯನ್ನು ನೀಡಲು ಪ್ರಯತ್ನ ನಡೆಸಿರಿ, ಬಡ ಮಹಿಳೆಗೆ ಮನೆಯೊಂದನ್ನು ಉಚಿತವಾಗಿ ನಿರ್ಮಿಸಿರುವುದು ಆದರ್ಶ ಸಂಸ್ಥೆಗಳ ಗುಣಲಕ್ಷಣವಾಗಿದೆ, ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಅರ್ಪಣೆ ಮಾಡೋಣ ಎಂದು ಕಸ್ತೂರಿ ಪಂಜ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ 10ನೇ ತೋಕೂರು ಕಂಬಳಬೆಟ್ಟುವಿನ ನಿವಾಸಿ ಬೊಮ್ಮಿ ಪೂಜಾರಿ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರ ನೆರವಿನಿಂದ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಮಾತನಾಡಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಟೋರ್ಟ್ಸ್ ಕ್ಲಬ್, ಯುವಕ ಸಂಘ ತೋಕೂರು, ಪಕ್ಷಿಕೆರೆಯ ವಿನಾಯಕ ಮಿತ್ರ ಮಂಡಳಿ, ಕಂಬಳಬೆಟ್ಟು ಫ್ರೇಂಡ್ಸ್, ಆಸರೆ ಟೀಮ್ ಗಣೇಶ್‌ಪುರ, ಎಸ್‌ಕೋಡಿ ಮಿತ್ರ ಮಂಡಳಿಯೊಂದಿಗೆ ವಿವಿಧ ದಾನಿಗಳು ವೈಯಕ್ತಿಕ ನೆರವನ್ನು ನೀಡಿದ್ದರಿಂದ ಮನೆಯನ್ನು ನಿರ್ಮಿಸಲು ಸಹಕಾರಿಯಾಯಿತು ಎಂದರು.
ಮೂಲ್ಕಿ ಪಟ್ಟಣ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್ ಅವರು ಮಾತನಾಡಿ, ಗ್ರಾಮಸ್ಥರ ನೆರವಿನಿಂದ ನಿರ್ಮಾಣವಾದ ಮನೆಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ಮೂಲ್ಕಿ ಯುವವಾಹಿನಿ ಸಂಸ್ಥೆಯಿಂದ ನೀಡಲಾಗುವುದು ಎಂದರು.
ವಿನೋದ್ ಬೊಳ್ಳೂರು, ದಿವಾಕರ ಕರ್ಕೇರ, ಹೇಮಂತ್ ಅಮೀನ್, ಲೀಲಾ ಬಂಜನ್, ದಿನೇಶ್ ಕುಲಾಲ್, ಸಂಪಾವತಿ, ಪುಷ್ಪಾವತಿ, ವಿವಿಧ ಸಂಸ್ಥೆಗಳ ಸುದರ್ಶನ್ ಬಂಗೇರ, ಸುಂದರ್‌ರಾಜ್, ಗುರುರಾಜ್ ಭಟ್, ಚಂದ್ರಶೇಖರ ಭಟ್, ಹರಿದಾಸ್ ಭಟ್, ರಾಜೇಶ್ ದಾಸ್. ರತನ್ ಶೆಟ್ಟಿ, ಭಾಸ್ಕರ ದೇವಾಡಿಗ, ಲೀಲಾಧರ ಶೆಟ್ಟಿಗಾರ್, ಇಂದಿರಾ ಶೆಟ್ಟಿಗಾರ್, ಧನಂಜಯ ಕುಲಾಲ್, ಧನಂಜಯ ಶೆಟ್ಟಿಗಾರ್, ದೀಕ್ಷಿತ್ ಸುವರ್ಣ, ಲೋಹಿತ್ ಕೋಟ್ಯಾನ್, ನವನೀತ್, ಜಗದೀಶ್ ಕುಲಾಲ್, ವಾರಿಜಾ, ಶಶಿಕಲಾ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

Kinnigoli-29031802

Comments

comments

Comments are closed.

Read previous post:
Kinnigoli-29031801
ಅತ್ತೂರು ಶ್ರೀ ಅರಸು ಕುಂಜಿರಾಯ ನೇಮೋತ್ಸವ

ಕಿನ್ನಿಗೋಳಿ : ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ಬುಧವಾರ ನಡೆಯಿತು.

Close