ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್‌

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ರಾಷ್ಟ್ರದ ಸ್ವಚ್ಛತಾ ರಾಯಭಾರಿಗಳು. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾದುದು ಎಂದು ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ಹೇಳಿದರು.
ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್‌ನ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಮಾತನಾಡಿ ಸಮಾಜಮುಖಿ ಕಾರ್ಯಗಳಿಂದ ಒಳ್ಳೆಯ ನೆರೆಹೊರೆಯವರಾಗಬೇಕು ಎಂದು ಹೇಳಿದರು.
ಈ ಸಂದಭ್ ಜೋಯ್ಸ್ ಮ್ಯೂರಲ್ ಮಸ್ಕರೇನಸ್ ಅವರನ್ನು ಗೌರವಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಮೂರು ವರ್ಷ ಸಕ್ರೀಯವಾಗಿ ಭಾಗವಹಿಸಿ ವಿಶಿಷ್ಟ ಸೇವೆ ಸಲ್ಲಿಸಿದ, ಯೂತ್ ರೆಡ್ ಕ್ರಾಸ್ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ವಯಂಸೇವಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾಲೇಜು ಪ್ರಿನ್ಸ್‌ಪಾಲ್ ಪ್ರೊ. ಜಗದೀಶ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ನಾಯಕ ವಿಶಾಲ್ ಬಿ. ಕುಲಾಲ್, ವರ್ಷಿಣಿ ಹಾಗು ತ್ರಿಷ ವಾರ್ಷಿಕ ವರದಿ ಮಂಡಿಸಿದರು. ವರ್ಷ, ಪೂಜ ಯು., ಪೂಜ ಬಿ. ಅಮೀನ್, ಪ್ರಜ್ವಲ್ ಕುಲಾಲ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಪ್ರೊ. ಸಿಲ್ವಿಯ ಪಾಯ್ಸ್ ವಂದಿಸಿದರು. ಪ್ರಮೋದ್ ಕುಮಾರ್ ಮತ್ತು ಶ್ರೀ ರಕ್ಷ ಕಾರ್ಯಕ್ರಮ ನಿರೂಪಿಸಿದರು.

Kinnigoli-30031802

Comments

comments

Comments are closed.

Read previous post:
Kinnigoli-30031801
ಅತ್ತೂರು ಅರಸು ಕುಂಜಿರಾಯ – ಧಾರ್ಮಿಕ ಸಭೆ

ಕಿನ್ನಿಗೋಳಿ : ದೈವ ದೇವರುಗಳ ಶಕ್ತಿಗಳಿಂದ ತುಳುನಾಡು ಅಭಿವೃದ್ದಿ ಕಂಡಿದೆ. ಅತ್ತೂರು ಕುಂಜಿರಾಯ ದೈವಸ್ಥಾನ ಸಾಮಾಜಿಕ ಕಳಕಳಿ, ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಎಂದು ಕಟೀಲು ದೇವಳದ ಅನುವಂಶಿಕ ಅರ್ಚಕ...

Close