ಅತ್ತೂರು ಅರಸು ಕುಂಜಿರಾಯ – ಧಾರ್ಮಿಕ ಸಭೆ

ಕಿನ್ನಿಗೋಳಿ : ದೈವ ದೇವರುಗಳ ಶಕ್ತಿಗಳಿಂದ ತುಳುನಾಡು ಅಭಿವೃದ್ದಿ ಕಂಡಿದೆ. ಅತ್ತೂರು ಕುಂಜಿರಾಯ ದೈವಸ್ಥಾನ ಸಾಮಾಜಿಕ ಕಳಕಳಿ, ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಎಂದು ಕಟೀಲು ದೇವಳದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಸಮೀಪದ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಶ್ರೀ ಅರಸು ಕುಂಜಿರಾಯ ದೈವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಅಳೆಪೆ ಸತ್ಸಂಗ ಸಮಿತಿಯ ವಾಸುದೇವ ಕೊಟ್ಟಾರಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ತುಳುವ ಮಣ್ಣು ಶ್ರೇಷ್ಟವಾದುದು, ಇದರಲ್ಲಿ ದೇವತಾ ಶಕ್ತಿ ಇದೆ, ತುಳುನಾಡಿನ ಜನರು ಹೊರ ದೇಶ ಹೊರ ರಾಜ್ಯಕ್ಕೆ ಹೋಗಿ ತಾವು ನಂಬಿದ ದೈವ ದೇವರುಗಳ ಆಶೀರ್ವಾದದಿಂದ ಜೀವನದಲ್ಲಿ ಅಭಿವೃದ್ದಿ ಕಂಡು, ನಂಬಿದ ದೈವ ದೇವರುಗಳಿಗೆ ಗುಡಿಗೋಪುರಗಳನ್ನು ಕಟ್ಟಿದ್ದಾರೆ ಎಂದರು.
ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅಧ್ಯಕ್ಷೆತೆ ವಹಿಸಿದ್ದರು.
ಈ ಸಂದರ್ಭ ದೈವಸ್ಥಾನದ ದಾನಿಗಳಾದ ಆಶಾಲತಾ ನಾರಾಯಣ ಶೆಟ್ಟಿ ಭಂಡಾರಮನೆ, ರಾಘು ಶೆಟ್ಟಿ ಭಂಡಾರ ಮನೆ, ಶಶಿಕರ ಶೆಟ್ಟಿ ಭಂಡಾರಮನೆ, ಶಶಿಕರ ಶೆಟ್ಟಿ ಭಂಡಾರಮನೆ, ಓಮಯ್ಯ ಶೆಟ್ಟಿ ಅಂಗಡಿಮನೆ, ಅತ್ತೂರು, ಲಕ್ಷ್ಮೀ ಶೆಟ್ಟಿ ಭಂಡಾರಮನೆ ಅವರನ್ನು ಗೌರವಿಸಲಾಯಿತು.
ದೈವ ನರ್ತಕ ಸತೀಶ್ ಪಂಬದ ಪೆರಾರ ಹಾಗೂ ಶಿವರಾಮ ಸೇರಿಗಾರ , ಸುಕೇಶ್ ಶೆಟ್ಟಿ, ಅದ್ವಿಕಾ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ವಿಧ್ಯಾರ್ಥಿಗಳಾದ ಪ್ರತಿಕ್ಷಾ ಶೆಟ್ಟಿ ಅತ್ತೂರು, ಶರಣ್ಯ ಗಣೇಶ್ ಆಚಾರ್ಯ, ಲಕ್ಷ್ಮೀ ಹರೀಶ್ ಶೆಟ್ಟಿ ಪಂಜ, ಶಿಲ್ಪಾ ರಮೇಶ್ ಕಾಫಿಕಾಡು, ಗ್ರೀಷ್ಮ ಸುರೇಶ್ ಶೆಟ್ಟಿಗಾರ್, ಧನರಾಜ್, ಸೌಮ್ಯ, ಸಾಕ್ಷಿ ಯೋಗೀಶ್, ಸಮೀಕ್ಷಾ ಸುಧಾಕರ ಶೆಟ್ಟಿ , ಪ್ರತೀಕ್ಷಾ, ಜಯಶ್ರೀ, ವಿನುತಾ ಬಾರ್ಗವಿ, ಚೈತ್ರಾ ಸುರೇಶ್, ಸನ್ನಿಧಿ ವಿಠಲ ಶೆಟ್ಟಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಾಂತಾರಾಮ, ಅಶ್ವಿನಿ, ಗುಲಾಬಿ ಪೂಜಾರ‍್ತಿ ಕಿಲೆಂಜೂರು ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು
ಈ ಸಂದರ್ಭ ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ ಉಡುಪಿ, ಮುಂಬಯಿ ಉದ್ಯಮಿ ಸತೀಶ್ ವಿ ಶೆಟ್ಟಿ ಪಡುಬಿದ್ರಿ, ಟೈಮ್ಸ್ ಆಫ್ ಇಂಡಿಯಾ ಮಂಗಳೂರು ವಿಭಾಗದ ಹಿರಿಯ ಪ್ರಬಂಧಕ ಕದ್ರಿ ನವನೀತ ಶೆಟ್ಟಿ, ಬಾಸ್ಕರ ಕೆ. ಶೆಟ್ಟಿ ಕುಡ್ತಿಮಾರುಗುತ್ತು, ವಿಶ್ವನಾಥ ಶೆಟ್ಟಿ ಅತ್ತೂರುಗುತ್ತು, ಗಣೇಶ್ ವಿ. ಶೆಟ್ಟಿ ಐಕಳ, ಸುರಗಿರಿ ಯುವಕ ಮಂಡಲದ ಅಧ್ಯಕ್ಷ ದೀರಜ್ ಶೆಟ್ಟಿ ಮಮ್ಮೆಟ್ಟು, ರಾಜೇಶ್ ಶೆಟ್ಟಿ ಭಂಡಾರ ಮನೆ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕೊಜಪಾಡಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಕೆ. ಶೆಟ್ಟಿ ಕುಡ್ತಿಮಾರುಗುತ್ತು, ಅಖೀಲಾಂಡೇಶ್ವರೀ ಸೇವಾ ಸಮಿತಿ ಅಧ್ಯಕ್ಷೆ ಲೀಲಾ ಸುವರ್ಣ, ಮತ್ತಿತರರು ಉಪಸ್ಥಿತರಿದ್ದರು.
ಪ್ರಸನ್ನ ಎಲ್ ಶೆಟ್ಟಿ ಅತ್ತೂರು ಗುತ್ತು ಪ್ರಸ್ತಾವನೆಗೈದರು. ರಾಜೇಶ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-30031801

Comments

comments

Comments are closed.

Read previous post:
Kinnigoli-29031802
ಸಮಾಜದ ಬಡವರ್ಗಕ್ಕೆ ಆಸರೆಯಾಗಿ

ಕಿನ್ನಿಗೋಳಿ : ಸಮಾಜದ ಬಡವರ್ಗಕ್ಕೆ ಆಸರೆಯಾಗಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು, ಜಾತಿ ಮತ ಭೇದವನ್ನು ದೂರಮಾಡಿ ಸಂಘಟನಾತ್ಮಕವಾಗಿ ಸೇವೆಯನ್ನು ನೀಡಲು ಪ್ರಯತ್ನ ನಡೆಸಿರಿ, ಬಡ ಮಹಿಳೆಗೆ ಮನೆಯೊಂದನ್ನು ಉಚಿತವಾಗಿ ನಿರ್ಮಿಸಿರುವುದು...

Close