ಪುನರೂರು ಪ್ರತಿಷ್ಠಾನ ಬೇಸಿಗೆ ಶಿಬಿರ

ಕಿನ್ನಿಗೋಳಿ : ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಯೋಗದೊಂದಿಗೆ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ ಬಾಲ ವಿಕಾಸ ಶಿಬಿರ-2018 ಎಪ್ರಿಲ್ 8 ರಿಂದ 15 ರ ವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 5 ರ ವರೆಗೆ ಜರಗಲಿದೆ.
ಶಿಬಿರದಲ್ಲಿ ಯೋಗ ಗುರು ಜಯ ಮುದ್ದು ಶೆಟ್ಟಿ ಯೋಗ ತರಬೇತಿ, ಶ್ಲೋಕ ಶಿಕ್ಷಕ ಜಿತೇಂದ್ರ ವಿ ರಾವ್ ಶ್ಲೋಕ ಕಂಠ ಪಾಠ, ಉಪನ್ಯಾಸಕ ಡಾ ಸೋಂದಾ ಭಾಸ್ಕರ ಭಟ್ ನೀತಿ ಕಥೆ ಉಪನ್ಯಾಸ, ಭಜನಾ ಶಿಕ್ಷಕ ಸುರೇಶ್ ಆಚಾರ್ಯ ಹಳೆಯಂಗಡಿ ಭಜನಾ ತರಬೇತಿ, ಕಲಾ ಶಿಕ್ಷಕ ವೆಂಕಿ ಫಲಿಮಾರ್ ಆವೆ ಮಣ್ಣಿನ ಕಲಾಕೃತಿ ರಚನೆ ಮತ್ತು ಕರ ಕುಶಲ ತರಬೇತಿ ನೀಡಲಿದ್ದಾರೆ.
ಶಿಬಿರಾರ್ಥಿಗಳು ಅರ್ಜಿಯೊಂದಿಗೆ ಆಧಾರ್ ಪ್ರತಿ ಹಾಗೂ 2 ಬಾವ ಚಿತ್ರಗಳನ್ನು ನೀಡ ತಕ್ಕದ್ದು. ಮೊದಲು ಬಂದ 50 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು. ಮೂಲ್ಕಿ ಹೋಬಳಿ ಮಟ್ಟದ 8 ರಿಂದ 13 ವರ್ಷ ವಯೋಮಿತಿಯ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಆಸಕ್ತರು ಎಪ್ರಿಲ್ 1 ರ ಒಳಗೆ ತಮ್ಮ ಅರ್ಜಿಯನ್ನು ದೇವಪ್ರಸಾದ್ ಪುನರೂರು ಅಧ್ಯಕ್ಷರು ಪುನರೂರು ಪ್ರತಿಷ್ಠಾನ,ಪುನರೂರು ರವರಿಗೆ ಸಲ್ಲಿಸತಕ್ಕದ್ದು ಹೆಚ್ಚಿನ ಮಾಹಿತಿಗಾಗಿ ಮೊಬ್ಯೆಲ್ ಸಂಖ್ಯೆ 9341223111 ಸಂಪರ್ಕಿಸುವಂತೆ ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಹಾಗೂ ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷೆ ಗೀತಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-30031802
ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್‌

ಕಿನ್ನಿಗೋಳಿ : ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ರಾಷ್ಟ್ರದ ಸ್ವಚ್ಛತಾ ರಾಯಭಾರಿಗಳು. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾದುದು ಎಂದು ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ...

Close