ಎನ್.ಪಿ.ಶೆಟ್ಟಿ ನೆನಪು ಕಾರ್ಯಕ್ರಮ

ಕಿನ್ನಿಗೋಳಿ : ಎನ್. ಪಿ ಶೆಟ್ಟಿಯವರು ಕನ್ನಡ ಮತ್ತು ತುಳು ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು ಯಕ್ಷಗಾನ, ಯೋಗ ಕ್ಷೇತ್ರದಲ್ಲಿಯೂ ಅಪಾರ ಜನಮನ್ನಣೆಯನ್ನು ಪಡೆದಿದ್ದರು. ಅವರ ಅಗಲಿಕೆಯಿಂದ ಮುಲ್ಕಿ ಹೋಬಳಿ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಶ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಟ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು, ಆಯೋಜಿಸಿರುವ ದಿ| ಶ್ರೀ ನಾರಾಯಣ ಪುಟ್ಟಣ್ಣ ಶೆಟ್ಟಿ (ಎನ್.ಪಿ.ಶೆಟ್ಟಿ) ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ದಿ| ಎನ್.ಪಿ.ಶೆಟ್ಟಿ ಅವರ ನೆನಪಿನ ಗೌರವವನ್ನು ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರಿಗೆ ನೀಡಲಾಯಿತು.
ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಹೊಸಅಂಗಣ ಮಾಸ ಪತ್ರಿಕೆ ಸಂಪಾದಕರು ಹರಿಶ್ಚಂದ್ರ ಪಿ. ಸಾಲ್ಯಾನ್, ಯೋಗಗುರು ಜಯ ಮುದ್ದು ಶೆಟ್ಟಿ, ಅವಿನಾಶ್ ಶೆಟ್ಟಿ, ಲಕ್ಷ್ಮೀಕಾಂತ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಿನ್ಸ್‌ಪಾಲ್ ವೈ,ಎನ್.ಸಾಲ್ಯಾನ್ ಸ್ವಾಗತಿಸಿದರು. ನಿಖಿತಾ, ರಕ್ಷಿತಾ ಮತ್ತು ಕಾವ್ಯ ಸಿ. ಪ್ರಾರ್ಥಿಸಿದರು, ಶಿಕ್ಷಕ ಹರಿ ಎಚ್ ವಂದಿಸಿದರು, ಕಿರಿಯ ತರಬೇತಿ ಅಧಿಕಾರಿ ವಿಶ್ವನಾಥ್ ರಾವ್ ನಿರೂಪಿಸಿದರು.

Kinnigoli-30031803

Comments

comments

Comments are closed.

Read previous post:
ಪುನರೂರು ಪ್ರತಿಷ್ಠಾನ ಬೇಸಿಗೆ ಶಿಬಿರ

ಕಿನ್ನಿಗೋಳಿ : ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಯೋಗದೊಂದಿಗೆ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ ಬಾಲ...

Close