ಕಿನ್ನಿಗೋಳಿ : ಧಾರ್ಮಿಕ ನಂಬಿಕೆಗಳು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಈ ಸನ್ನಿಧಿ ಹಿಂದಿನಿಂದಲೂ ಬಹಳ ಕಾರಣಿಕದ ಕ್ಷೇತ್ರವಾಗಿದ್ದು, ಇದರ ಜೀರ್ಣೋದ್ದಾರಕ್ಕೆ ಭಕ್ತರ ಸಹಕಾರ ಅಗತ್ಯ ಎಂದು ಗಂಗಾಧರ ಶೆಟ್ಟಿ ಮೂಡ್ರಗುತ್ತು ಹೇಳಿದರು.
ಅವರು ಕೆಮ್ರಾಲ್ ನ ಶರಣದಲ್ಲಿ ಜೀರ್ಣೋದ್ದಾರಗೊಳ್ಳಲಿರುವ ಧರ್ಮ ಶಾಸ್ತಾರ ಸನ್ನಿಧಿಯಲ್ಲಿ ತೀರ್ಥಬಾವಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಗುರುಪ್ರಸಾದ್ ಉಡುಪ ದೊಡ್ದ ಮನೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭ ಜಯ ಶೆಟ್ಟಿ ಮೂಡ್ರಗುತ್ತು, ರಾಜೇಶ್ ಆಚಾರ್ಯ ಶರಣ, ವಸಂತ್ ಕೋಟ್ಯಾನ್, ವಿಶ್ವೇಶ ಉಡುಪ, ನಾರಾಯಣ ಕುಲಾಲ್, ಕೃಷ್ಣ ಕುಲಾಲ್, ರಾಘು ಸಾಲಿಯಾನ್, ಧನಂಜಯ ಆಚಾರ್ಯ, ಕಿಶೋರ್ ಕುಲಾಲ್, ನಾರಾಯಣ ಟೈಲರ್, ಬಾಲಕೃಷ್ಣ ಪೂಜಾರಿ, ಅಶ್ವಿನ್ ಕುಲಾಲ್, ಪ್ರದೀಪ್ ಶೆಟ್ಟಿ, ಲೋಕೇಶ್ ಕುಂದರ್ ಬೊಂಟೆಮಾರ್, ಉದಯ ಪೂಜಾರಿ, ಸೂರಜ್, ಗುತ್ತಿಗೆದಾರ ರೋಹಿದಾಸ್, ಮತ್ತಿತರರು ಉಪಸ್ಥಿತರಿದ್ದರು.