ಕಿನ್ನಿಗೋಳಿ: ಬಿಜೆಪಿ ಮಹಿಳೆಯರ ಸಭೆ

ಕಿನ್ನಿಗೋಳಿ : ಕಾರ್ಯಕರ್ತರು ಕೇಂದ್ರ ಸರಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ದ. ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಮಿತಾ ಶ್ಯಾಮ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಶಕ್ತಿಕೇಂದ್ರದ ಆಶ್ರಯದಲ್ಲಿ ನಡೆದ ಮಹಿಳೆಯರ ಬೂತ್ ಮಟ್ಟದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯ ಸರಕಾರ ಮಹಿಳೆಯರಿಗೆ ಭಾಗ್ಯಗಳ ಯೋಜನೆಯ ಹೆಸರು ಮಾತ್ರ ಹೇಳಿದ್ದು ಆದರೇ ಅಂತಹ ಯೋಜನೆಗಳು ಸರಿಯಾಗಿ ಕಾರ್ಯಗತವಾಗದೆ ಜನರಿಗೆ ಮುಟ್ಟಿಲ್ಲ ಅದನ್ನು ಜನರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ಹೇಳಿದರು. ಯುಗಪುರುಷದ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯಿತಿ ಸದಸ್ಯೆರಾದ ಶುಭಲಕ್ಷ್ಮೀ, ವಜ್ರಾಕ್ಷೀ ಶೆಟ್ಟಿ , ಮನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಶಾಂಭವಿ ಶೆಟ್ಟಿ , ಕಸ್ತೂರಿ ದಯಾನಂದ, ತುಳಸಿ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್
ಏ. 6 ರಂದು ಬಿಜೆಪಿಯ ಸ್ಥಾಪನ ದಿನವಾಗಿರುವುದರಿಂದ ಅಂದಿನಿಂದ ಒಂದು ವಾರಗಳ ಕಾಲ ಮಹಿಳಾ ಮೋರ್ಚಾ ಹಾಗೂ ಮಹಿಳಾ ಕಾರ್ಯಕರ್ತರಿಂದ ಪ್ರತಿ ಬೂತ್ ಮಟ್ಟದಲ್ಲಿ ಒಂದನೇ ಹಂತದ ಮನೆ ಮನೆ ಬೇಟಿ ಕಾರ್ಯಕ್ರಮ ನಡೆಯಲಿದೆ.
– ನಮಿತ್ ಶ್ಯಾಮ್

Kinnigoli-03041802

Comments

comments

Comments are closed.

Read previous post:
Kinnigoli-03041801
ಗ್ರಾಮೀಣ ಕ್ರೀಡಾಳುಗಳಿಗೆ ಪ್ರೋತ್ಸಾಹ ಸಿಗಲಿ

ಕಿನ್ನಿಗೋಳಿ : ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಸೂಕ್ತ ಪ್ರೋತ್ಸಾಹ ತರಬೇತಿ ಸಿಕ್ಕಲ್ಲಿ ದೇಶವನ್ನು ಪ್ರತಿನಿಸುವ ಅವಕಾಶ ಸಿಗಬಹುದು. ಕ್ರೀಡಾಳುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಶ್ರಮ ಪಡಬೇಕು ಎಂದು ಉದ್ಯಮಿ ರಮೇಶ್...

Close