ಗ್ರಾಮೀಣ ಕ್ರೀಡಾಳುಗಳಿಗೆ ಪ್ರೋತ್ಸಾಹ ಸಿಗಲಿ

ಕಿನ್ನಿಗೋಳಿ : ಗ್ರಾಮೀಣ ಭಾಗದ ಕ್ರೀಡಾಳುಗಳಿಗೆ ಸೂಕ್ತ ಪ್ರೋತ್ಸಾಹ ತರಬೇತಿ ಸಿಕ್ಕಲ್ಲಿ ದೇಶವನ್ನು ಪ್ರತಿನಿಸುವ ಅವಕಾಶ ಸಿಗಬಹುದು. ಕ್ರೀಡಾಳುಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಶ್ರಮ ಪಡಬೇಕು ಎಂದು ಉದ್ಯಮಿ ರಮೇಶ್ ದೇವಾಡಿಗ ತೋಕೂರು ಹೇಳಿದರು.
ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ತೋಕೂರು ಸರಕಾರಿ ಪ್ರಾಥಮಿಕ ಹಿಂದೂಸ್ಥಾನಿ ಶಾಲೆಯಲ್ಲಿ ಭಾನುವಾರ ನಡೆದ ತೋಕೂರು ದಿ. ಬೂಬ ದೇವಾಡಿಗರ ಸ್ಮರಣಾರ್ಥ ಗ್ರಾಮೀಣ ಮಟ್ಟದ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್ ಆಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯನ್ನು ಸಂಘ ಸಂಸ್ಥೆಗಳು ಮಾಡಿ ಯುವ ಪ್ರತಿಭೆಗಳಿಗೆ ಆಸರೆಯಾಗಬೇಕು ಎಂದರು.
ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದವು.
ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ವಿಶಾಲ್, ಕ್ರಿಕೇಟ್ ತಂಡದ ನಾಯಕ ಸುಖಾನಂದ ಶೆಟ್ಟಿ, ಶಂಕರ ಪೂಜಾರಿ, ಸಂತೋಷ್‌ಕುಮಾರ್, ಸಂತೋಷ್ ದೇವಾಡಿಗ, ಗೌತಮ್ ಬೆಳ್ಚಡ, ವಿಪಿನ್ ಶೆಟ್ಟಿ, ಮಹೇಶ್ ಬೆಳ್ಚಡ, ಹರ್ಫಾಜ್, ಜಗದೀಶ್ ಬೆಳ್ಚಡ, ಫಯಾಜ್, ಲೋಹಿತ್ ದೇವಾಡಿಗ, ವಿನೂಸ್, ಕಿರಣ್, ಸುನಿಲ್, ಜಗದೀಶ್ ಕುಲಾಲ್, ನಿರಾಜ್ ಶೆಟ್ಟಿ, ದೀಪಕ್ ಸುವರ್ಣ, ಗಣೇಶ್ ಉಪಸ್ಥಿತರಿದ್ದರು.
ಕ್ಲಬ್‌ನ ಕೋಶಾಧಿಕಾರಿ ಪ್ರಶಾಂತ್‌ಕುಮಾರ್ ಬೇಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-03041801

Comments

comments

Comments are closed.

Read previous post:
Kinnigoli-03041804
ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರ ಸಂಸ್ಮರಣೆ

ಕಿನ್ನಿಗೋಳಿ : ಯಕ್ಷಗಾನ ಕ್ಷೇತ್ರದಲ್ಲಿ ಅಗರಿ ಶ್ರೀನಿವಾಸ ಭಾಗವತರ ಕೊಡುಗೆ ಅನನ್ಯ ಕಟೀಲು ಮೇಳದ ದೇವಿ ಮಹಾತ್ಮೆ ಪ್ರಸಂಗಕ್ಕೆ ಹಿರಿಯ ಬಲಿಪ ಭಾಗವತರ ಜೊತೆಗೆ ಅಗರಿಯವರು ಉತ್ತಮ ರಂಗ ತರಬೇತಿ...

Close