ಸೈಂಟ್ ಮೇರಿಸ್ ಟೇಬಲ್ ಮತ್ತು ಕುರ್ಚಿ ಹಸ್ತಾಂತರ

ಕಿನ್ನಿಗೋಳಿ : ತಾಳಿಪಾಡಿ ಬ್ರಹ್ಮಶ್ರೀ ನಾರಾಯಣ ಗುರು ಪರಿಪಾಲನಾ ಸಮಿತಿ(ರಿ) ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತಿದೆ ಎಂದು ಸಮಿತಿ ಅಧ್ಯಕ್ಷ ಕುಶಲ ಪೂಜಾರಿ ಹೇಳಿದರು.
ಕಿನ್ನಿಗೋಳಿ ಸೈಂಟ್ ಮೇರಿಸ್ ವಿಶೇಷ ಶಾಲಾ ಮಕ್ಕಳಿಗೆ ಬರೆಯುವ ಟೇಬಲ್ ಮತ್ತು ಕುರ್ಚಿ ಹಸ್ತಾಂತರಿಸಿ ಮಾತನಾಡಿ, ವಿಶೇಷ ಮಕ್ಕಳನ್ನು ಪ್ರತ್ಯೇಕವಾಗಿ ನೋಡುವಂತಿಲ್ಲ ನಾವು ಎಲ್ಲಾರೂ ಒಂದೇ, ಇಂತಹ ಮಕ್ಕಳಿಗೆ ಸಂಘ ಸಂಸ್ಥೆಗಳು ಸಹಾಯ ಹಸ್ತ ನೀಡಬೇಕು ಎಂದರು.
ಈ ಸಂದರ್ಭ ಸಮಿತಿ ವತಿಯಿಂದ ಮಕ್ಕಳಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಶಾಲಾ ಸಂಚಾಲಕ ವಿನ್ಸೆಂಟ್ ಮೋಂತೇರೋ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಸಮಿತಿಯ ಕೋಶಾಧಿಕಾರಿ ನವೀನ್ ಕುಕ್ಯಾನ್, ಉಮೇಶ್ ಕೋಟ್ಯಾನ್, ಸೋಮಶೇಖರ ಕೋಟ್ಯಾನ್, ಪಂಚಾಯಿತಿ ಸದಸ್ಯ ಅರುಣ್ ಕುಮಾರ್, ಗಣೇಶ್ ಚೋಟರ್ಕೆ, ಗಣೇಶ್ ಕೋಟ್ಯಾನ್, ಯೋಗೀಶ್, ವಲೇರಿಯನ್ ಸಿಕ್ವೇರ, ಹೇಮಂತ್, ಶಾಲಾ ಮುಖ್ಯ ಶಿಕ್ಷಕಿ ರೇಶ್ಮಾ ಮರಿಯಾ ಸಿಕ್ವೇರ, ಸ್ಟೀಪಾನಿಯ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03041803

 

Comments

comments

Comments are closed.

Read previous post:
Kinnigoli-03041802
ಕಾಪಿಕಾಡು ಫ್ರೆಂಡ್ಸ್ ಕ್ಲಬ್ ಕಟ್ಟಡಕ್ಕೆ ಶಿಲಾನ್ಯಾಸ

ಕಿನ್ನಿಗೋಳಿ : ಪಕ್ಷಿಕೆರೆ -ಅತ್ತೂರು ಕಾಪಿಕಾಡು ಫ್ರೆಂಡ್ಸ್ ಕ್ಲಬ್ ಕಟ್ಟಡಕ್ಕೆ ಶಿಲಾನ್ಯಾಸ ಪ್ರಧಾನ ಅರ್ಚಕ ಪಂಜ ವಾಸುದೇವ ಭಟ್ ಶಿಲಾನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಕ್ಲಬ್...

Close