ಪ್ರಮಾಣ ಪತ್ರ ವಿತರಣಾ ಸಮಾರಂಭ

ಕಿನ್ನಿಗೋಳಿ : ಕುಶಲಕರ್ಮಿಗಳು ಸದಾ ಕ್ರಿಯಶೀಲರಾಗಿದ್ದು ಹೆಚ್ಚಿನ ಕೌಶಲ್ಯಭರಿತರಾಗಿ ಕೌಶಲ್ಯ ಭಾರತದ ಕನಸನ್ನು ನನಸಾಗಿಸಬೇಕು ಮತ್ತು ಕಲಿಕೆಯೊಂದಿಗೆ ಗಳಿಕೆಗೂ ಆದ್ಯತೆಕೊಟ್ಟು ದೇಶದ ಆರ್ಥಿಕಸ್ಥಿತಿಯನ್ನು ಗಟ್ಟಿಗೊಳಿಸಬೇಕು ಎಂದು ವೇಣೂರಿನ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಸದಾನಂದ ಪೂಜಾರಿ ತಿಳಿಸಿದರು.
ತಪೋವನ, ತೋಕೂರು ಇಲ್ಲಿನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎರಡು ವರ್ಷದ ತರಬೇತಿಯನ್ನು ಪೂರೈಸಿದ ಕುಶಲಕರ್ಮಿಗಳಿಗೆ ಭಾರತ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಮಂತ್ರಾಲಯ ನವದೆಹಲಿ ಕೊಡಮಾಡಿದ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ ವಿತರಿಸುತ್ತಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರದ ಮಹತ್ವವನ್ನು ವಿವರಿಸುತ್ತಾ ಪ್ರಮಾಣ ಪತ್ರವು ಭಾರತ ದೇಶದ ಲಾಂಛನವನ್ನು ಹೊಂದಿದ್ದು ದೇಶ ಹಾಗೂ ವಿದೇಶಗಳಲ್ಲಿ ಉದ್ಯೋಗಗಳಿಸುವಲ್ಲಿ ಮತ್ತು ತಮ್ಮದೇ ಸ್ವಂತ ಉದ್ಯಮ ಪ್ರಾರಂಭಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಲಕ್ಷ್ಮೀಕಾಂತ್, ಉದಯಕುಮಾರ್ ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
ಕಾವ್ಯ ಸಿ. , ರಕ್ಷಿತಾ ಮತ್ತು ನಿಖಿತಾರವರ ಪ್ರಾರ್ಥಿಸಿದರು, ಹರಿ ಹೆಚ್. ಸ್ವಾಗತಿಸಿದರು, ಶಿಮರಾಮ ದೇವಾಡಿಗ ವಂದಿಸಿದರು, ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03041801

Comments

comments

Comments are closed.

Read previous post:
Kinnigoli-31031803
ಕೆಮ್ರಾಲ್ ಶರಣ : ತೀರ್ಥಬಾವಿಯ ಶಿಲಾನ್ಯಾಸ

ಕಿನ್ನಿಗೋಳಿ : ಧಾರ್ಮಿಕ ನಂಬಿಕೆಗಳು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಈ ಸನ್ನಿಧಿ ಹಿಂದಿನಿಂದಲೂ ಬಹಳ ಕಾರಣಿಕದ ಕ್ಷೇತ್ರವಾಗಿದ್ದು, ಇದರ ಜೀರ್ಣೋದ್ದಾರಕ್ಕೆ ಭಕ್ತರ ಸಹಕಾರ ಅಗತ್ಯ ಎಂದು...

Close